21.6 C
Sullia
Saturday, March 7, 2026

ಸುಳ್ಯದಲ್ಲಿ ಕೆವಿಜಿ ವತಿಯಿಂದ ರಾಷ್ಟ್ರ ಮಟ್ಟದ ಹಾಫ್ ಮ್ಯಾರಥಾನ್ ,ಬೆಳ್ಳಂ ಬೆಳಗ್ಗೆ ಎದ್ದು ವಿಭಿನ್ನ ವೇಷಭೂಷಣಗಳೊಂದಿಗೆ ಓಡಿದ ಸಾವಿರಾರು ಸ್ಪರ್ಧಿಗಳು


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಹಾಗೂ ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರಮಟ್ಟದ ಹಾಫ್ ಮ್ಯಾರಥಾನ್ ಶನಿವಾರ ಮುಂಜಾನೆ ನಡೆಯಿತು.

ಕೆವಿಜಿ ಸಮೂಹ ಸಂಸ್ಥೆಗಳ ಕ್ರೀಡಾಂಗಣದಿಂದ ಆರಂಭಗೊಂಡ ಹಾಫ್ ಮ್ಯಾರಥಾನ್ ಕ್ರಮವಾಗಿ 5,10 ಹಾಗೂ 21 ಕಿಲೋ ಮೀಟರ್ ವಯೋಮಾನದ ಆಧಾರದಲ್ಲಿ ನಡೆಯಿತು. ಮಹಿಳೆ ಮತ್ತು ಪುರುಷ ವಿಭಾಗದಲ್ಲಿ ಪ್ರತ್ಯೇಕವಾಗಿ 18ಕ್ಕೆ ಒಳಪಟ್ಟ ವಿಭಾಗ ಮತ್ತು 18-35 ವಯೋಮಾನ,36-50 ಮತ್ತು 50 ಕ್ಕಿಂತ ಹೆಚ್ಚಿನ ವಯೋಮಾನದಲ್ಲಿ ನಡೆಯಿತು. ಮ್ಯಾರಥಾನ್ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಚಿದಾನಂದ ಕೆ.ವಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶೋಭಾ ಚಿದಾನಂದ , ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಟ್ರಸ್ಟಿ ಹಾಗೂ ವೈಧ್ಯರ ಸಂಘದ ಅಧ್ಯಕ್ಷೆ ಡಾ.ಐಶ್ವರ್ಯ ಕೆ.ಸಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಸಮಾರೋಪ ಸಮಾರಂಭದಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ವಿಜೇತರಾದವರಿಗೆ ನಗದು ಸಹಿತ ಪದಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಪ್ರಶಸ್ತಿ ಪ್ರಧಾನ ಸಂಧರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಹೆಚ್ಚುವರಿ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಅನಿಲ್ ಕುಮಾ‌ರ್ ಎಸ್‌ ಭೂಮರೆಡ್ಡಿ, ಪುತ್ತೂರು ಡಿವೈಎಸ್ ಪಿ ಪ್ರಮೋದ್ ಕುಮಾ‌ರ್ , ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹೀದ್ ತೆಕ್ಕಿಲ್, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ ಮುಸ್ತಫ ಮತ್ತಿತರರು ಉಪಸ್ಥಿತರಿದ್ದರು. ಮ್ಯಾರಥಾನ್‌ನಲ್ಲಿ ವಿಶೇಷ ವೇಷ ಭೂಷಣಗಳನ್ನು ತೊಟ್ಟು ಗಮ್ಮತ್‌ ರನ್‌ನಲ್ಲಿ ಭಾಗವಹಿಸಿದರು. ದೇಶದ ವಿವಿಧ ಭಾಗಗಳಿಂದ 3000 ಕ್ಕೂ ಅಧಿಕ ಮಂದಿ ಭಾಗಿಯಾಗಿ ಯಶಸ್ವಿಯಾಯಿತು.

Related Articles

LEAVE A REPLY

Please enter your comment!
Please enter your name here

Latest Articles