27.7 C
Sullia
Sunday, March 8, 2026

ರುಕ್ಮಿಣಿ ವಸಂತ್ ಹೃದಯ ಗೆದ್ದ ಈ ಚೆಲುವ ಯಾರು? ಕನಕವತಿಯ ಫೋಟೋ ವೈರಲ್


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್ : ಕಾಂತಾರ ಅಧ್ಯಾಯ ೧ ರ ನಟಿ ರುಕ್ಮಿಣಿ ವಸಂತ್ ಅಭಿಮಾನಿಗಳು ರಾತ್ರಿ ಎಲ್ಲ ನಿದ್ದೆ ಇಲ್ಲದೇ ಒದ್ದಾಡುತ್ತಾರೆ. ಆಕೆ ಜತೆ ಇರೋ ಹುಡುಗ ಯಾರಿರಬಹುದು ಎಂದು ತಲೆ ಕೆದರಿಕೊಂಡು ಹುಡುಕುತ್ತಿದ್ದಾರೆ.

ಹೌದು, ರುಕ್ಮಿಣಿ ವಸಂತ್ ಹುಡುಗನೊಬ್ಬನ ಜೊತೆ ಆತ್ಮೀಯವಾಗಿ ತೆಗೆಸಿಕೊಂಡ ಫೋಟೊ ಕಣ್ಣಿಗೆ ಕಂಡು ಅವರ ಗಂಡು ಅಭಿಮಾನಿಗಳು ಭಾರಿ ಬೇಸರದಲ್ಲಿದ್ದಾರೆ. ಒಂದು ಅನಿರೀಕ್ಷಿತ ಆಘಾತ ರುಕ್ಮಿಣಿ ವಸಂತ್ ಅವರ ಅಭಿಮಾನಿಗಳಿಗೆ ಸದ್ಯ ಆಗಿದೆ. ಸುರಸುಂದರಾಂಗನ ಜೊತೆ ರುಕ್ಮಿಣಿ ತೆಗೆಸಿಕೊಂಡ ಫೋಟೊ ವೈರಲ್ ಆಗಿದೆ.

ಹೌದು, ”ಬೀರ್‌ಬಲ್” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರುಕ್ಮಿಣಿ ವಸಂತ್, ”ಸಪ್ತಸಾಗರದಾಚೆ ಎಲ್ಲೋ ಸೈಡ್ ಎ” ಮತ್ತು ”ಸೈಡ್ ಬಿ” ಚಿತ್ರಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು. ಅಕ್ಕ-ಪಕ್ಕದ ರಾಜ್ಯದವರ ಕಣ್ಣಿಗೂ ಬಿದ್ದರು. ಕಳೆದ ವರ್ಷ ಬಿಡುಗಡೆಯಾದ ”ಕಾಂತಾರ” ಮೂಲಕ ಇಡೀ ದೇಶದ ಹೃದಯ ಗೆದ್ದರು.

ವೈರಲ್ ಆದ ಈ ಫೋಟೊವನ್ನು ಕಂಡು ರುಕ್ಮಿಣಿ ವಸಂತ್ ಅವರ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ‌ಬೇಸರಗೊಂಡಿದ್ದಾರೆ. ತಮ್ಮ ದುಖಃ ಹಂಚಿಕೊಳ್ತಿದ್ದಾರೆ. ಆದರೆ ಹುಡುಗನ ಜನ್ಮ ಜಾತಕ ಜಾಲಾಡಿರುವ ಸೋಶಿಯಲ್ ಮೀಡಿಯಾ ಪ್ರವೀಣರ ಬಳಿ ನಿಜಕ್ಕೂ ಈ ವ್ಯಕ್ತಿ ರುಕ್ಮಿಣಿ ವಸಂತ್ ಅವರ ಬಾಯ್‌ಫ್ರೆಂಡಾ..? ಎನ್ನುವುದಕ್ಕೆ ಉತ್ತರ ಇಲ್ಲ. ರುಕ್ಮಿಣಿ ವಸಂತ್ ಕೂಡ ಇಲ್ಲಿಯವರೆಗೆ ತಮ್ಮ ವ್ಯೆಯಕ್ತಿಕ ಜೀವನ ಮತ್ತು ಪ್ರೀತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಫೋಟೊದಲ್ಲಿರುವ ವ್ಯಕ್ತಿ ನನ್ನ ಪ್ರಿಯಕರ ಎಂದು ಯಾವತ್ತು ಹೇಳಿಲ್ಲ.

Related Articles

LEAVE A REPLY

Please enter your comment!
Please enter your name here

Latest Articles