27.7 C
Sullia
Sunday, March 8, 2026

ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆಯಾಗಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ಅಧಿಕಾರ ಸ್ವೀಕಾರ, ಅದ್ದೂರಿ ಕಾರ್ಯಕ್ರಮ

ನ್ಯೂಸ್ ನಾಟೌಟ್: ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆಯಾಗಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ಜ.20ರಂದು ಅಧಿಕಾರ ಸ್ವೀಕಾರ ಮಾಡಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಕಾರ್ಯದರ್ಶಿಯಾಗಿ ತಾರಾ ಮಾಧವ ಚೂಂತಾರು, ಕೋಶಾಧಿಕಾರಿಯಾಗಿ ಪ್ರಸನ್ನ ಎಂ.ಆರ್ ಕೂಡ ಅಧಿಕಾರ ಸ್ವೀಕಾರ ಮಾಡಿದರು. ವಲಯ 15ರ ವಲಯ ಉಪಾಧ್ಯಕ್ಷ ಜಿತೇಶ್ ಪೆರೇರಾ ಪದ ಪ್ರಧಾನ ನೆರವೇರಿಸಿದರು. ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಆಗಮಿಸಿ ಶುಭ ಹಾರೈಸಿದರು. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಕಾನತ್ತಿಲ, ಕಾರ್ಯಕ್ರಮ ಸಂಯೋಜಕ ರವಿಕುಮಾರ್ ‌ಅಕ್ಕೋಜಿಪಾಲ್ ವೇದಿಕೆಯಲ್ಲಿ ‌ಇದ್ದರು. ಜತೆ‌ ಕಾರ್ಯದರ್ಶಿ ವಿನೋದ್ ಮೂಡಗದ್ದೆ ಜೇಸಿ ವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ಅಶೋಕ್ ಚೂಂತಾರು ನಿಕಟಪೂರ್ವಾಧ್ಯಕ್ಷರ ಪರಿಚಯ‌ ಮಾಡಿದರು. ಪ್ರಸನ್ನ ಎಂ.ಆರ್. ನೂತನ ಕಾರ್ಯದರ್ಶಿಯವರನ್ನು, ಐಪಿಪಿ ಗುರುಪ್ರಸಾದ್ ನಾಯಕ್ ನೂತನ ಅಧ್ಯಕ್ಷರನ್ನು, ನವೀನ್ ಕುಮಾರ್ ಅಜ್ಜಾವರ ನೂತನ ಸದಸ್ಯರನ್ನು, ಉಮೇಶ್ ಬೊಳುಗಲ್ಲು ಅತಿಥಿಗಳನ್ನು ಪರಿಚಯಿಸಿದರು.

Related Articles

LEAVE A REPLY

Please enter your comment!
Please enter your name here

Latest Articles