ನ್ಯೂಸ್ ನಾಟೌಟ್ : ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಘವೇಂದ್ರ ಸ್ವಾಮಿಗಳ (Guru Raghavendra Swamy) ಫೋಟೋ ನೀಡಲು ಬಂದಾಗ ಫೋಟೋ ಸ್ವೀಕಾರ ಮಾಡದೇ ಫೋಟೋವನ್ನ ತಳ್ಳಿದ ನಡೆಗೆ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್ (Jaggesh) ತೀವ್ರ ಬೇಸರ ಹೊರಹಾಕಿದ್ದಾರೆ.
ಸಿದ್ರಾಮಯ್ಯ ಅವರು ರಾಘವೇಂದ್ರ ಸ್ವಾಮಿಯ ಫೋಟೋ ತಳ್ಳುತ್ತಿರುವ ವಿಡಿಯೋಜೊತೆಗೆ ಸಂದೇಶವೊಂದನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ!. ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ, ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು. ರಾಯರಿದ್ದಾರೆ.. ಎದ್ದುಬರುತ್ತಾರೆ.. ಕಾಯಬೇಕು ಅಂತ ಬರೆದುಕೊಂಡಿದ್ದಾರೆ.
ಏನಿದು ಘಟನೆ?
ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ರಾಘವೇಂದ್ರ ಸ್ವಾಮಿಗಳ ಫೋಟೋ ನೀಡಲು ಬಂದಾಗ ಫೋಟೋ ಸ್ವೀಕಾರ ಮಾಡದೇ ಫೋಟೋವನ್ನ ತಳ್ಳಿದ್ದರು. ಮುಖ್ಯಮಂತ್ರಿಗಳ ಕಾವೇರಿ ನಿವಾಸದ ಬಳಿ ಘಟನೆ ನಡೆದಿತ್ತು. ಬೆಳಗಾವಿ ಪ್ರವಾಸಕ್ಕೆ ತೆರಳಲು HAL ಗೆ ತೆರಳುವ ವೇಳೆ ಕಾವೇರಿ ನಿವಾಸದ ಗೇಟ್ ಬಳಿ ಸಾರ್ವಜನಿಕರಿಂದ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸ್ವೀಕರ ಮಾಡ್ತಿದ್ದರು. ಆಗ ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯಗೆ ರಾಘವೇಂದ್ರ ಫೋಟೋ ಕೊಡಲು ಮುಂದಾದ್ರು.
ಈ ವೇಳೆ ಸಿಎಂ ರಾಘವೇಂದ್ರ ಸ್ವಾಮಿ ಫೋಟೋ ಸ್ವೀಕಾರ ಮಾಡದೇ ಫೋಟೋ ತಳ್ಳಿದ್ರು. ಅಲ್ಲದೆ ಅಭಿಮಾನಿ ಮೇಲೆ ಗರಂ ಆದ್ರು. ಈ ಹಿಂದೆ ಕುಂಕುಮ, ಪೇಟ ತಿರಸ್ಕರಿಸುತ್ತಿದ್ದ ಸಿಎಂ ಇದೀಗ ರಾಘವೇಂದ್ರ ಸ್ವಾಮಿ ಫೋಟೋ ತಿರಸ್ಕಾರ ಮಾಡಿದ ಘಟನೆ ನಡೆದಿದೆ. ಇದಕ್ಕೆ ವಿಪಕ್ಷ ನಾಯಕರೂ ಆಕ್ರೋಶ ವ್ಯಕ್ತಪಡಿಸಿದ್ದರು













