37.3 C
Sullia
Sunday, March 8, 2026

ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮೇಲೆ ಕೈದಿಗಳಿಂದ ಹಲ್ಲೆ : ಕೇಸ್‌ ದಾಖಲು

ನ್ಯೂಸ್ ನಾಟೌಟ್ : ಪರಪ್ಪನ ಅಗ್ರಹಾರ ಜೈಲಿನ ಅಸಿಸ್ಟೆಂಟ್ ಜೈಲರ್ ಮೇಲೆ ಕೈದಿಗಳು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಶಿಕ್ಷಾ ಬಂಧಿಗಳಾದ ಆನಂದ (1489) ಮತ್ತು ಅಬ್ದುಲ್ ಘನಿ (18589) ಹಲ್ಲೆ ಸಿಬ್ಬಂದಿ ಮೇಲೆ ನಡೆಸಿದ್ದಾರೆ. ಇಬ್ಬರು ಸೇರಿ ಅನಾವಶ್ಯಕವಾಗಿ ಶಿಕ್ಷಾ ಬಂಧಿ ಕಚೇರಿಗೆ ನುಗ್ಗಲು ಯತ್ನಿಸಿದ್ದರು. ಇದನ್ನು ಅಸಿಸ್ಟೆಂಟ್ ಜೈಲರ್ ತಡೆಯಲು ಮುಂದಾದಾಗ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಪ್ರಭಾರ ಅಧೀಕ್ಷಕರು ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಸಿಬ್ಬಂದಿಯ ರಕ್ಷಣಾ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಜ.7 ರಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಜ.17 ರಂದು ಪರಪ್ಪನ ಅಗ್ರಹಾರ ಠಾಣೆಗೆ ದೂರು ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles