27.7 C
Sullia
Sunday, March 8, 2026

ಚಳಿಗಾಲದಲ್ಲೂ ಕರ್ನಾಟಕದ ಈ ಜಿಲ್ಲೆಯಲ್ಲಿ ಭಾರೀ ಮಳೆ..!ರೈತರ ಕಣ್ಣಲ್ಲಿ ನೀರು ತಂದ ವರ್ಷದ ಮೊದಲ ವರ್ಷಧಾರೆ

ನ್ಯೂಸ್ ನಾಟೌಟ್ : ಚಳಿಯ ನಡುವೆಯೂ ಧಾರಾಕಾರವಾದ ಮಳೆ ಸುರಿದಿದ್ದರಿಂದ ರೈತರ ಬೆಳೆದ ಬೆಳೆಗಳು ಹಾನಿಯಾಗಿರುವ ಘಟನೆ ರಾಜ್ಯದ ಹಲವೆಡೆ ಸಂಭವಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇನ್ನು ಮಳೆಯಲ್ಲಿಯೇ ಶಾಲೆಗೆ ಹೋದ ಮಕ್ಕಳು ಮನೆಗೆ ಹಿಂದಿರಗಲು ಕೊಂಚ ತೊಂದರೆ ಅನುಭವಿಸಿದರು. ಸಾರ್ವಜನಿಕರು ಇದೇನಿದು ಚಳಿಯಲ್ಲಿ ಮಳೆ ಅಂದುಕೊಳ್ಳುತ್ತ ಅಂಗಡಿಗಳ ಮುಂದೆ ಆಶ್ರಯ ಪಡೆದಿದ್ದರು. ಅಯ್ಯೋ ಇದೆಂಥಾ ಚಳಿ, ಮಳೆ ಎಂದು ಓಡೋಡಿ ಹೋಗಿ ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡರು. 

ಹಲವೆಡೆ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಸುರಿದ ಜೋರು ಮಳೆ ಜೊತೆ ಗಾಳಿ ಕೂಡ ಬೀಸಿದ್ದರಿಂದ ವಿಪರೀತ ಚಳಿಯಿಂದ ಜನರು ತತ್ತರಿಸಿದ್ದಾರೆ. ಅಕಾಲಿಕ ಮಳೆಯಿಂದ ಅನ್ನದಾತ ಚಿಂತೆ ಮಾಡುವಂತೆ ಅಗಿದೆ. ಕಟಾವಿಗೆ ಬಂದ ಭತ್ತ ನೆಲಕಚ್ಚುವ ಆತಂಕದಲ್ಲಿ ರೈತರು ಇದ್ದಾರೆ. ಚಿಕ್ಕಮಗಳೂರಿನ ಹಲವು ಕಡೆ ಕಾಫಿ ಬಿಡಿಸಿದ್ರೆ, ಇನ್ನು ಕೆಲವೆಡೆ ಗಿಡದಲ್ಲಿಯೇ ಹಣ್ಣಾಗಿ ಹಾಗೆ ಇದೆ. ಮಳೆಯಿಂದ ಇದು ಉದುರಿದ ರೈತನಿಗೆ ನಷ್ಟವಾಗುತ್ತದೆ.ಇನ್ನು ದಕ ಜಿಲ್ಲೆಯಲ್ಲೂ ಅಡಿಕೆ ಬೆಳೆಗಾರರು ದಿಢೀರ್ ಸುರಿದ ಮಳೆಗೆ ಏನು ಮಾಡಬೇಕು ತೋಚದೇ ಕಂಗಾಲಾದರು.ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ ಮಳೆಗೆ ಕೊಚ್ಚಿಹೋದ ಪ್ರಸಂಗ ಕೆಲವು ಕಡೆ ನಡೆದಿದೆ.

Related Articles

LEAVE A REPLY

Please enter your comment!
Please enter your name here

Latest Articles