ನ್ಯೂಸ್ ನಾಟೌಟ್ : ಮಕರ ಸಂಕ್ರಾಂತಿ ಬಂದ್ರೆ ಸಾಕು ದೇಶದೆಲ್ಲೆಡೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಘೋಷಣೆಗಳು ಕೇಳಿ ಬರುತ್ತವೆ. ಅಯ್ಯಪ್ಪನ ಭಕ್ತರು ಮಾಲಾಧಾರಿಗಳಾಗಿ ಇರುಮುಡಿ ಕಟ್ಟಿಕೊಂಡು ಮಣಿಕಂಠನ ದರ್ಶನಕ್ಕೆ ಹೊಗುವುದನ್ನ ನೋಡುವುದೇ ಒಂದು ಹಬ್ಬ. ಇಂದು ಮಕರ ಸಂಕ್ರಾಂತಿ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಮಕರ ಜ್ಯೋತಿ ನೋಡಲು ಕೋಟ್ಯಂತರ ಭಕ್ತರು ಕಾಯುತ್ತಿದ್ದಾರೆ.
. ಈ ಬಾರಿಯೂ ಕೂಡ ಆ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಮಕರ ಜ್ಯೋತಿ ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸಾಗರೋಪಾದಿಯಲ್ಲಿ ಇನ್ನೂ ಆಗಮಿಸುತ್ತಲೇ ಇದ್ದಾರೆ
ಶಬರಿಮಲೆಯತ್ತ ಭಕ್ತಕೋಟಿ ಆಗಮಿಸುತ್ತಿರುವ ಹಿನ್ನೆಲೆ ವಿಶೇಷ ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಭಕ್ತರಿಗಾಗಿ ವಿಶೇಷವಾಗಿ 1,000 ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ಅಯ್ಯಪ್ಪನ ಭಕ್ತರ ಉಪವಾಸವು ಈ ಮಕರ ಸಂಕ್ರಾಂತಿಯಂದು ಅಂತ್ಯಗೊಳ್ಳುತ್ತದೆ. ಅಯ್ಯಪ್ಪ ಸ್ವತಃ ಆಗಸದಲ್ಲಿ ಸಂಜೆ ನಂತರ ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ, ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಭಕ್ತ ಕೋಟಿ ಶಬರಿಮಲೆಯಲ್ಲಿ ಸೇರಿರುತ್ತಾರೆ













