ನ್ಯೂಸ್ ನಾಟೌಟ್: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ್ ಭಟ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಕೊಡಮಾಡಲಾಗಿರುವ ಗೌರವ ಡಾಕ್ಟರೇಟ್ ಹಿನ್ನಲೆಯಲ್ಲಿ ಸಂಪಾಜೆ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು , ಬೋಧಕ-ಬೋಧಕೇತರರು ಕಲ್ಲುಗುಂಡಿಯ ಶ್ಯಾಮ್ ಭಟ್ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು. ಇದೇ ವೇಳೆ ಸಂಪಾಜೆ ಪ್ರೌಢ ಶಾಲೆ ಮತ್ತು ಜೂನಿಯರ್ ಕಾಲೇಜಿನ ಶ್ಯಾಮ್ ಭಟ್ ನೀಡಿರುವ ಕೊಡುಗೆಯನ್ನು ಶಾಲೆಯ ಆಡಳಿತ ಮಂಡಳಿ ಸ್ಮರಿಸಿಕೊಂಡಿತು.













