21.6 C
Sullia
Saturday, March 7, 2026

ಜ.24ರಂದು ಸುಳ್ಯದಲ್ಲಿ ರಾಷ್ಟ್ರ ಮಟ್ಟದ 21 ಕಿ.ಮೀ. ಹಾಫ್ ಮ್ಯಾರಥಾನ್, ಒಟ್ಟು ಬಹುಮಾನಗಳ ಮೊತ್ತ 5.5 ಲಕ್ಷ ರೂ. ಎಒಎಲ್ಇ & ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜನೆ

ನ್ಯೂಸ್ ನಾಟೌಟ್: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಹಾಗೂ ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಜ. 24ರಂದು ಸುಳ್ಯ ದಲ್ಲಿ 21 ಕಿ.ಮೀ. ಓಪನ್ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ಆರೋಗ್ಯ, ಶಿಸ್ತು, ಫಿಟ್ನೆಸ್ ಮತ್ತು ಯುವಜನರಲ್ಲಿ ಕ್ರೀಡಾಸ್ಪೂರ್ತಿಯನ್ನು ಬೆಳೆಸುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಲಾಗಿದೆ. ಬೆಳಳ 5 ಗಂಟೆಗೆ ಕೆ.ವಿ.ಜಿ. ಕ್ರೀಡಾಂಗಣದಿಂದ ಮ್ಯಾರಥಾನ್ ಆರಂಭಗೊಳ್ಳಲಿದೆ. ಮ್ಯಾರಥಾನ್ ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಒಟ್ಟು ಬಹುಮಾನ ಮೊತ್ತ ರೂ. 5.5 ಲಕ್ಷವಾಗಿರುತ್ತದೆ. ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಸಕ್ತ ಸ್ಪರ್ಧಿಗಳು ಪೋಸ್ಟರ್ ನಲ್ಲಿ ನೀಡಿರುವ QR ಕೋಡ್ ಮೂಲಕ ಅಥವಾ ಕೆಳಗೆ ನೀಡಿರುವ ರಿಜಿಸ್ಟ್ರೇಷನ್ ಲಿಂಕ್ ಬಳಸಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, https://konfhub.com/national-level-sullia-half-marathon ಹೆಚ್ಚಿನ ಮಾಹಿತಿಗಾಗಿ 7353752223, 7353756812, 9916424844, 9945844236 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles