ನ್ಯೂಸ್ ನಾಟೌಟ್ : ಗಿಲ್ಲಿ ನಟ, ಧನುಷ್, ರಕ್ಷಿತಾ ಶೆಟ್ಟಿ, ಧ್ರವಂತ್ ಮತ್ತು ಅಶ್ವಿನಿ ಗೌಡ ಅವರು ಟಾಪ್ ಫೈವ್‌ನಲ್ಲಿರುತ್ತಾರೆ. ರಘು, ರಾಶಿಕಾ ಶೆಟ್ಟಿ ಮತ್ತು ಕಾವ್ಯಾ ಫಿನಾಲೆಗೆ ಬರಲ್ಲ. ಧನುಷ್ ಗೆಲ್ಲಬೇಕು ಆದ್ರೆ ಗಿಲ್ಲಿ ನಟ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಆಗುತ್ತಾರೆ ಎಂದು ಸ್ಪಂದನಾ ಸೋಮಣ್ಣ ಭವಿಷ್ಯ ನುಡಿದರು. ನನಗೆ ಧ್ರುವಂತ್ ಇಷ್ವ ಆಗಲ್ಲ, ಆದ್ರೆ ಅವರಾಟ ಜನರಿಗೆ ಇಷ್ಟವಾಗಿ ಫಿನಾಲೆವರೆಗೂ ಬರಬಹುದು ಎಂದು ಹೇಳಿದರು.
ನನ್ನನ್ನು ಚೆನ್ನಾಗಿ ನೋಡಿಕೊಂಡ್ರು
ಟಾಸ್ಕ್ ಆಡುವಾಗ ನನ್ನ ಕಾಲಿಗೆ ಪೆಟ್ಟು ಬಿದ್ದಾಗ ಮನೆಯ ಸದಸ್ಯರೆಲ್ಲರೂ ತುಂಬಾ ಚೆನ್ನಾಗಿ ನೋಡಿಕೊಂಡರು. ಆ ಸಮಯದಲ್ಲಿ ನನಗೆ ಪರ್ಸನಲ್ ಕೆಲಸಗಳನ್ನು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ತನ್ನ ಕೆಲಸಗಳನ್ನು ಮಾಡಿಕೊಳ್ಳದ ಗಿಲ್ಲಿ ನಟ ಸಹ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಹೇಳಿದರು.













