ನ್ಯೂಸ್ ನಾಟೌಟ್ : ಬಳ್ಳಾರಿ ನಗರದಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆಯಾಗಿದೆ. ಈ ಘಟನೆಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾನೆ.
ಸದ್ಯ ರಾಜಶೇಖರ್ ಮೃತದೇಹವನ್ನು ಬಳ್ಳಾರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನ್ಯಾಯ ವೈದ್ಯಶಾಸ್ತ್ರ ವಿಭಾಗದ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಯಲಿದೆ. 1 ತಾಸಿಗೂ ಹೆಚ್ಚು ಕಾಲ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಪೊಲೀಸ್ ಭದ್ರತೆ ನೀಡಲಿದ್ದಾರೆ. ಇನ್ನು ಶವಾಗಾರದ ಎದುರು ಮೃತನ ಕುಟುಂಬಸ್ಥರು ಜಮಾಯಿಸಿದ್ದಾರೆ.
ಘಟನೆ ಕುರಿತು ಗೃಹಸಚಿವ ಪರಮೇಶ್ವರ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬ್ಯಾನರ್ ಅಳವಡಿಕೆ ವೇಳೆ ಕಿತ್ತಾಡಿಕೊಂಡಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ಮೇಲೆ ಬ್ರೂಸ್‌ಪೇಟೆ ಠಾಣೆಯಲ್ಲಿ FIR ದಾಖಲಾಗಿದೆ. ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಹಾಗೂ ದಮ್ಮೂರು ಶೇಖರ್ ಸೇರಿ ಒಟ್ಟು 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗಲಾಟೆಯಲ್ಲಿ ಶಾಸಕ ಜನಾರ್ದನ್ ರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಪರಸ್ಪರ ಕಲ್ಲು ತುರಾಟ ಮಾಡಿದ್ದಾರೆ. ಈ ಗಲಾಟೆ ಜೋರಾಗುತ್ತಿದ್ದಂತೆ ಸತೀಶ್ ರೆಡ್ಡಿ ಅವ್ರ ಖಾಸಗಿ ಗನ್ ಮ್ಯಾನ್‌ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ..
ಬಳ್ಳಾರಿಯಲ್ಲಿ (Ballari) ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಎದುರು ನಡೆದಿರುವ ಘಟನೆ ಕಾಂಗ್ರೆಸ್ ಗೂಂಡಾಗಳು ನಡೆಸಿದ ಸರ್ಕಾರಿ ಪ್ರಾಯೋಜಕತ್ವದ ಪೂರ್ವ ನಿಯೋಜಿತ (Ballari Violence) ದುಷ್ಕೃತ್ಯವಾಗಿದೆ. ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.













