21.6 C
Sullia
Sunday, March 8, 2026

ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್!!ರಾಜಸ್ಥಾನ ಪ್ಯಾಲೇಸ್​ನಲ್ಲಿ ಮದುವೆ!

ನ್ಯೂಸ್ ನಾಟೌಟ್ : ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ 2026 ಫೆಬ್ರವರಿ 26 ರಂದು ನಡೆಯಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನಿಶ್ಚಿತಾರ್ಥ ಕಾರ್ಯಕ್ರಮದಂತೆ ವಿವಾಹ ಸಮಾರಂಭ ಕೂಡ ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಷ್ಟೇ ನಡೆಯಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವರದಿಗಳ ಪ್ರಕಾರ, ವಿವಾಹ ಕಾರ್ಯಕ್ರಮವು ರಾಜಸ್ಥಾನದ ಉದಯ್​ಪುರ ಪ್ಯಾಲೇಸ್​​ನಲ್ಲಿ ನಡೆಯಲಿದೆ.  ಮದುವೆ ಬಳಿಕ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಆರತಕ್ಷತೆ ಕಾರ್ಯಕ್ರಮವು ಹೈದರಾಬಾದ್​ನಲ್ಲಿ ಆಯೋಜನೆಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಿಗೆ ಆಹ್ವಾನ ನೀಡಲಿದ್ದಾರೆ. ಈ ಜೋಡಿ 2025, ಅಕ್ಟೋಬರ್ 3 ರಂದು ನಿಶ್ಚಿತಾರ್ಥ ನೆರವೇರಿಸಿಕೊಂಡಿತ್ತು. 

ಇನ್ನೊಂದು ವಿಚಾರ ಅಂದ್ರೆ ಇಬ್ಬರೂ ಕೂಡ ಎಂಗೆಜ್ಮೆಂಟ್ ಆಗಿರುವ ವಿಚಾರವನ್ನೂ ಇನ್ನೂ ಕೂಡ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಹಾಲಿವುಡ್ ವರದಿಗಾರನೊಬ್ಬ ರಶ್ಮಿಕಾರನ್ನು ಸಂದರ್ಶನ ಮಾಡಿದ್ದ. ಈ ವೇಳೆ ಮದುವೆ ವದಂತಿ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದ್ದ ರಶ್ಮಿಕಾ, ಮದುವೆಯನ್ನು ನಾನು ದೃಢಕರಿಸಲು ಅಥವಾ ನಿರಾಕರಿಸಲು ಇಷ್ಟಪಡುವುದಿಲ್ಲ. ಅದರ ಬಗ್ಗೆ ನಾವು ಯಾವಾಗ ಹೇಳಬೇಕು ಅಂತಾ ಹೇಳ್ತೇವೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles