21.6 C
Sullia
Sunday, March 8, 2026

ವನಸುಮ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ವಾರ್ಷಿಕೋತ್ಸವ, ಅಂಜಲಿ ಮೊಂಟೆಸ್ಸರಿಯ ಗೀತಾಂಜಲಿ ಭಾಗಿ

ನ್ಯೂಸ್ ನಾಟೌಟ್: ಸುಳ್ಯದ ಮುದ್ದು ಮಕ್ಕಳ ಶಾಲೆ ಎಂದೇ ಖ್ಯಾತಿ ಪಡೆದಿರುವ ಅಂಜಲಿ ಮೊಂಟೆಸ್ಸರಿಯ ಸಂಚಾಲಕಿ ಗೀತಾಂಜಲಿಯವರು ಜಾಲ್ಸೂರಿನ ಅಡ್ಕಾರಿನಲ್ಲಿರುವ ವನಸುಮ ವಿದ್ಯಾರ್ಥಿ ನಿಲಯದಲ್ಲಿ ಡಿ.27ರಂದು ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವಿದ್ಯಾರ್ಥಿ ನಿಲಯದ ಅಧ್ಯಕ್ಷ ಡಾ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಅಜ್ಜಾವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ಪರ್ಯಾವರಣ ಸಂರಕ್ಷಣ ಸಂಯೋಜಕ ಜಯರಾಮ ಬೊಳ್ಳಾಜೆ ಮುಖ್ಯ ವಕ್ತಾರರಾಗಿ ಆಗಮಿಸಿದರು. ಇದೇ ಸಂದರ್ಭದಲ್ಲಿ ಗೀತಾoಜಲಿಯವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ನಿಲಯದ ವಿದ್ಯಾರ್ಥಿಗಳಿಂದ ಭಜನೆ ಹಾಗೂ ಸಭಾ ಕಾರ್ಯಕ್ರಮದ ನಂತರ ನಿಲಯದ ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಿಲಯದ ಸಹ ವ್ಯವಸ್ಥಾಪಕಿ ವೀರಮ್ಮ ವರದಿ ವಾಚಿಸಿದರು. ಸೌಮ್ಯ ಬಹುಮಾನಿತರ ಪಟ್ಟಿ ವಾಚಿಸಿದರು. ಚಂದ್ರಶೇಖರ ದೊಡ್ಡೇರಿ ಸ್ವಾಗತಿಸಿದರು. ಶ್ರೀದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Latest Articles