21.6 C
Sullia
Saturday, March 7, 2026

ಮಂಗಳೂರು: ಪೊಲೀಸಪ್ಪನ ಕಾರು ಗುದ್ದಿ ಬೈಕ್ ಸವಾರ ಸಾವು, ಡ್ರಿಂಕ್ ಅಂಡ್ ಡ್ರೈವ್ ಆರೋಪ, ಮದ್ಯಪಾನ ಮಾಡಿದ್ದು ಸಾಬೀತಾಗಿಲ್ಲ ಪೊಲೀಸ್ ಇಲಾಖೆ ಸ್ಪಷ್ಟನೆ, ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್: ಪೊಲೀಸ್ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬರ ಕಾರು ಗುದ್ದಿದ ಪರಿಣಾಮ ಬೈಕ್ ಸವಾರರೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮೃತಪಟ್ಟ ವ್ಯಕ್ತಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದೆ. ಆರೋಪಿತ ಪ್ರಸನ್ನ ಎನ್ನುವವನು ದಕ್ಷಿಣ ಕನ್ನಡ ಜಿಲ್ಲಾ ಡಿಸಿಆರ್ ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ಸದ್ಯ ಕಾರಿನೊಳಗೆ ಮದ್ಯ ಸಿಕ್ಕಿದೆ ಅನ್ನುವ ವಿಡಿಯೋ ವೈರಲ್ ಆಗುತ್ತಿದೆ.

ಮಹಿಳೆಯೊಬ್ಬರ ಆಡಿಯೋ ಕೂಡ ಅದರಲ್ಲಿ ಇದ್ದು ಪೊಲೀಸ್ ವ್ಯಕ್ತಿ ಮದ್ಯಪಾನ ಮಾಡಿದ್ದ ಎಂದು ಆರೋಪಿಸಲಾಗಿದೆ. ಆಲ್ಕೋಮೀಟರ್ ಪರೀಕ್ಷೆಯನ್ನು ಆಡಿಯೋ ಪ್ರಸಾರ ಮಾಡಿದ ಮಹಿಳೆಯ ಸಮ್ಮುಖದಲ್ಲಿ ಮಾಡಲಾಗಿದೆ ಈ ವೇಳೆ ಮಧ್ಯಪಾನ ಮಾಡಿರುವುದು ಖಚಿತಪಟ್ಟಿಲ್ಲ ಎಂದು ತಿಳಿದು ಬಂದಿದೆ. ಆರೋಪಿಯ ರಕ್ತ ಪರೀಕ್ಷೆಯನ್ನೂ ನಡೆಸಲಾಗುವುದು ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:88/2025, ಕಲಂ: ಕಲಂ: 281,106(1) ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Latest Articles