ನ್ಯೂಸ್ ನಾಟೌಟ್ : ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ 2026ರ ಜ. 3 ಮತ್ತು 4ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ವೇದಿಕೆಯಲ್ಲಿ ‘ಸುಳ್ಯೋತ್ಸವ – 2026’ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಉತ್ಸವದ ರೂವಾರಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಳ್ಯ ಜಾತ್ರೋತ್ಸವ ಪ್ರಯುಕ್ತ ಆಯೋಜಿಸಿದ ಸುಳ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಜತೆಗೆ ನಮ್ಮ ಊರಿನ ಪ್ರತಿಭಾನ್ವಿತರಿಗೆ ಅವಕಾಶ ಒದಗಿಸಲಾಗುವುದು. ಜನರಿಗೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.


ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ. ಅವರ ಸಾರಥ್ಯದಲ್ಲಿ, ವಿವಿಧ ಪ್ರಾಯೋಜಕರ ಸಹಕಾರದೊಂದಿಗೆ ಸುಳ್ಯೋತ್ಸವ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಲಾ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಖ್ಯಾತ ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳು ಪ್ರದರ್ಶನಗೊಳ್ಳಲಿವೆ. ಸಾಯಂಕಾಲ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಿಸಲಿವೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಕೆ.ವಿ. ಚಿದಾನಂದ ಹಾಗೂ ಡಾ. ಹರಪ್ರಸಾದ್ ತುದಿಯಡ್ಕ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುಳ್ಯೋತ್ಸವ ಸಮಿತಿ ವಿನಂತಿಸಿದೆ. ಈ ಸಂದರ್ಭ ಸುಳ್ಯೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೆ. ಜಿ, ಉಪಾಧ್ಯಕ್ಷ ಸನತ್ ಪಿ. ಆರ್ ಹಾಗೂ ಹರಿರಾಯ ಕಾಮತ್, ಖಜಾಂಚಿ ಗಣೇಶ್ ಆಳ್ವ, ಪ್ರಧಾನ ಕಾರ್ಯದರ್ಶಿ ಡಾ. ಚೈತ್ರ ಅವಿನಾಶ್, ಜೊತೆ ಕಾರ್ಯದರ್ಶಿ ಮಧುರಾ ಜಗದೀಶ್, ಮಿಥುನ್ ಕಡೆಂಗ, ಬಾಬುಗೌಡ, ನಿರ್ದೇಶಕರಾದ ಶೈಲೇಂದ್ರ ಸರಳಾಯ, ಗಿರೀಶ್ ನಾರ್ಕೋಡು, ಸಾಯಿರಾಂ ದೊರವರಿ, ಭುವನ್ ಅತ್ಯಾಡಿ, ಅಭಿಷೇಕ್ ಕೇಕಡ್ಕ, ತೀರ್ಥೇಶ್ ಪಾರೆಪ್ಪಾಡಿ, ರಜತ್ ಅಡ್ಕಾರ್, ಕಾರ್ತಿಕ್ ಕುಡೆಕಲ್ಲು ಉಪಸ್ಥಿತರಿದ್ದರು.













