27.7 C
Sullia
Sunday, March 8, 2026

ಮಗಳ ಕೊರಳಿನಲ್ಲಿದ್ದ ಸರ ನೋಡಿ ಮೃತದೇಹ ಪತ್ತೆ ಹಚ್ಚಿದ ತಂದೆ,ಆಕೆಗೆ ಮದುವೆ ಫಿಕ್ಸ್ ಆಗಿತ್ತು ಎನ್ನುತ್ತಾ ಕಣ್ಣೀರು

ನ್ಯೂಸ್ ನಾಟೌಟ್: ಹಿರಿಯೂರು ಪಟ್ಟಣದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಒಟ್ಟು ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. 


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬೆಂಕಿಯಲ್ಲಿ ಬೆಂದು ಕರಕಲಾಗಿರುವ ಮೃತದೇಹಗಳ ಗುರುತು ಪತ್ತೆ ಮಾಡೋದೇ ಸವಾಲಿನ ಕೆಲಸವಾಗಿದೆ. ಈ ಮಧ್ಯೆ ತಂದೆಯೊಬ್ಬರು ಮಗಳ ಮೃತದೇಹ ಪತ್ತೆಹಚ್ಚಿದ್ದಾರೆ. ಕೊರಳಲ್ಲಿದ್ದ ಸರ ನೋಡಿ ಇವಳೇ ನನ್ನ ಮಗಳು ಎಂದು ಗುರುತು ಹಿಡಿದಿದ್ದಾಳೆ. 

ಜೀವ ಕಳೆದುಕೊಂಡ ಹೆಣ್ಮಗಳ ಹೆಸರು ಮಾನಸ. ತಂದೆ ಚಂದ್ರಗೌಡ ನೀಡಿದ ಮಾಹಿತಿಯಂತೆ, ಮಾನಸ ಮೂಲತಃ ಚನ್ನರಾಯಪಟ್ಟಣದವಳು. ನನ್ನ ಮಗಳು ಶನಿವಾರ ಅಥವಾ ಭಾನುವಾರ ಊರಿಗೆ ಬರ್ತೀನಿ ಎಂದಿದ್ದಳು. ಆಮೇಲೆ ಮದುವೆ ಡೇಟ್ ಫಿಕ್ಸ್ ಮಾಡೋಣ ಅಂತ ಹೇಳಿದ್ದಳು. ಆಕೆಗೆ ಮದುವೆ ಫಿಕ್ಸ್ ಆಗಿತ್ತು ಎಂದು ಕಣ್ಣೀರು ಇಟ್ಟಿದ್ದಾರೆ. 

Related Articles

LEAVE A REPLY

Please enter your comment!
Please enter your name here

Latest Articles