27.7 C
Sullia
Sunday, March 8, 2026

15 ಖಾತೆ, 150 ಪೋಸ್ಟ್‌ ವಿರುದ್ಧ ವಿಜಯಲಕ್ಷ್ಮಿ ದೂರು,ವಿಕೋಪಕ್ಕೆ ತಿರುಗಿದ ಸ್ಟಾರ್‌ ವಾರ್‌

ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಕೆಟ್ಟ ಕಮೆಂಟ್‌ ಪೋಸ್ಟ್‌ ಮಾಡಿದ ಖಾತೆಗಳ ವಿರುದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸೈಬರ್‌ ಕ್ರೈಂ (Cyber Crime) ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ದರ್ಶನ್ ಇದ್ದಾಗ ಯಾರೂ ಮಾತನಾಡುತ್ತಿರಲಿಲ್ಲ. ಈಗ ವೇದಿಕೆ, ಟಿವಿ ಚಾನೆಲ್‌ಗಳಲ್ಲಿ ಮಾತನಾಡುತ್ತಾರೆ. ದರ್ಶನ್ ಇದ್ದಾಗ ಇವರೆಲ್ಲಾ ಇದ್ರೋ? ಇರಲಿಲ್ವೋ ಎಂದು ಪ್ರಶ್ನಿಸಿ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದರು.

ಈ ಹೇಳಿಕೆ ನೀಡಿದ ಬಳಿಕ ವಿಜಯಲಕ್ಷ್ಮಿ ಅವರ ವಿರುದ್ಧ ನಿಂದನೆಗಳ ಪೋಸ್ಟ್‌ ಪ್ರಕಟವಾಗುತ್ತಿದೆ.  ನಿಂದನೆಯ ವಿರುದ್ಧ ಸಿಡಿದ ವಿಜಯಲಕ್ಷ್ಮಿ 15 ಇನ್‌ಸ್ಟಾಗ್ರಾಂ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಮೆಂಟ್‌ ವಿರುದ್ಧ ಫೋಟೋ ಸಮೇತ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮಗಳು ವಿಜಯಲಕ್ಷ್ಮಿ ಅವರನ್ನು ಮಾತನಾಡಲು ಪ್ರಯತ್ನಿಸಿದವು. ಆದರೆ ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡದೇ ಕಾರು ಹತ್ತಿ ತೆರಳಿದರು.

Related Articles

LEAVE A REPLY

Please enter your comment!
Please enter your name here

Latest Articles