21.6 C
Sullia
Sunday, March 8, 2026

ಪೈರಸಿ ಯುದ್ಧದಿಂದ ನಿಲ್ಲಲ್ಲ, ಸರ್ಕಾರದ ನೆರವು ಅಗತ್ಯ: ಹಾಸ್ಯ ನಟ ಸಾಧು ಕೋಕಿಲ

ನ್ಯೂಸ್ ನಾಟೌಟ್ : ಪೈರಸಿ ದೊಡ್ಡ ಪಿಡುಗು. ಅದನ್ನು ಎಷ್ಟೇ ನಿಲ್ಲಿಸಲು ಪ್ರಯತ್ನಿಸಿದರೂ ಮತ್ತೆ ಹುಟ್ಟಿಕೊಳ್ಳುತ್ತಿದೆ. ಹಾಗಂತ, ಪೈರಸಿಯನ್ನು ಯುದ್ಧ ಮಾಡಿ ನಿಲ್ಲಿಸಲಾಗದು ಎಂದು ಚಲನಚಿತ್ರ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರರಂಗದಲ್ಲಿ ಪೈರಸಿ ಈಗಿನಿಂದ ನಡೆಯುತ್ತಿಲ್ಲ. ಅದನ್ನು ನಿಲ್ಲಿಸಲು ಎಷ್ಟೆಷ್ಟೋ ಪ್ರಯತ್ನಗಳಾಗಿವೆ. ಆದರೂ, ಪೈರಸಿಗಳು ಹುಟ್ಟಿಕೊಳ್ಳುತ್ತಿದೆ. ಪೈರಸಿ ನಿಲ್ಲಿಸಲು ಸರ್ಕಾರದ ನೆರವು ಬೇಕು ಎಂದರು.

ನಟರಾದ ಸುದೀಪ್‌ ಮತ್ತು ದರ್ಶನ್‌ ಪತ್ನಿ ನಡುವಿನ ಹೇಳಿಕೆಗಳ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಚಲನಚಿತ್ರ ನಿರ್ದೇಶಕ ತರುಣ್‌ ಸುಧೀರ್‌, ಸುದೀಪ್‌ ಮತ್ತು ದರ್ಶನ್‌ ಅವರ ಅಭಿಮಾನಿಗಳ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ವಿಕೃತ ಖುಷಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಅದು ಮೊದಲು ನಿಲ್ಲಬೇಕು.

ನಾನು ಯಾರ ಬಗ್ಗೆನೂ ಮಾತನಾಡಿಲ್ಲ. ಯಾರನ್ನು ಉದ್ದೇಶಿಸಿ ಮಾತನಾಡಿಲ್ಲ. ನನ್ನ ಮಾತು ನೇರವಾಗಿಯೇ ಪೈರಸಿಯ ವಿಚಾರಕ್ಕೇನೆ ಸಂಬಂಧಿಸಿದ್ದೇ ಆಗಿದೆ. ಆದರೆ, ನನ್ನ ಮಾತಿನ ಬಳಿಕ ಅದ್ಯಾರೊ ಮಾತನಾಡಿದ್ದಾರೆ ಅಂದ್ರೆ ಅದರ ಬಗ್ಗೆ ನನ್ನ ಕೇಳ್ಬೇಡಿ, ಅವರನ್ನು ಹೋಗಿ ಕೇಳಿ.

Related Articles

LEAVE A REPLY

Please enter your comment!
Please enter your name here

Latest Articles