ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಮಂಗಳೂರು ಕಬಡ್ಡಿ ಅಸೋಸಿಯೇಶನ್ ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಸದ್ ಖೇಲ್ ನಮೋ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ಅಕ್ಷಯ್ ಕೆ ಸಿ ಮಾಲಕತ್ವದ ಎನ್ಎಂಸಿ ತಂಡವು ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಕಬಡ್ಡಿ ತಂಡದ ತರಬೇತುದಾರ ನಾಗರಾಜ್ ಭಟ್ಕಳ್ ಹಾಗೂ ಕಬಡ್ಡಿ ತಂಡದ ಮ್ಯಾನೇಜರ್ ಪ್ರಕಾಶ್ ಯಾದವ್ ಉಪಸ್ಥಿತರಿದ್ದರು.













