21.6 C
Sullia
Saturday, March 7, 2026

ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ರಥಯಾತ್ರೆಯ ಸ್ವಾಗತ ಹಾಗೂ ಜನಜಾಗೃತಿ ಕಾಯಕ್ರಮ,ಪರಿವರ್ತನಾ ಸೇವಾ ಟ್ರಸ್ಟ್ ಬೆಂಗಳೂರು, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆ,ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ರಿ.) ಸುಳ್ಯ ಹಾಗೂ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಸಹಯೋಗ


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್ :ಪರಿವರ್ತನಾ ಸೇವಾ ಟ್ರಸ್ಟ್ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ರಿ.) ಸುಳ್ಯ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆ ಗಳು ಹಾಗೂ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಶಾ ಮುಕ್ತ ಕರ್ನಾಟಕ ಅಭಿಯಾನ ರಥಯಾತ್ರೆಯ ಸ್ವಾಗತ ಹಾಗೂ ಜನಜಾಗೃತಿ ಕಾಯಕ್ರಮವು ಡಿ. 20 ರಂದು ನೆಹರೂ ಮೆಮೋರಿಯಲ್ ಕಾಲೇಜಿನ ಆವರಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಂಗವಾಗಿ ಕೆ ವಿ ಜಿ ವೃತ್ತದಿಂದ ನೆಹರೂ ಮೆಮೋರಿಯಲ್ ಕಾಲೇಜಿನ ವರೆಗೆ ಬೃಹತ್ ಜನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು.

ಬಳಿಕ ನೆಹರೂ ಮೆಮೋರಿಯಲ್ ಕಾಲೇಜಿನ ಆವರಣದಲ್ಲಿ ಜನ ಜಾಗೃತಿ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸುಳ್ಯದ ತಹಶೀಲ್ದಾರ್ ಆದ ಕು. ಮಂಜುಳಾ ಎಂ ಅವರು ಜಾಥಕ್ಕೆ ಚಾಲನೆಯನ್ನು ನೀಡಿ ಯುವಜನತೆಯಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತರಾಗಿರಬೇಕೆಂದು ಸಂದೇಶವನ್ನು ನೀಡಿದರು

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ರಿ.) ಸುಳ್ಯದ ಗೌರವಾಧ್ಯಕ್ಷರು ಹಾಗೂ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಉಪಸ್ಥಿತರಿದ್ದು ಮಾತನಾಡಿ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸುತ್ತಾ ಮಾದಕ ವ್ಯಸನದಿಂದಾಗುವ ದುರಂತಗಳ ಕುರಿತು ಯುವಕರಲ್ಲಿ ಜಾಗೃತಿಯನ್ನು ಮೂಡಿಸಿ ಡ್ರಗ್ಸ್ ಮುಕ್ತ ನಾಡನ್ನು ನಿರ್ಮಿಸಲು ಕರೆ ನೀಡಿದರು.

ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ರಥಯಾತ್ರೆಯೊಂದಿಗೆ ಆಗಮಿಸಿದ ಪರಿವರ್ತನಾ ಸೇವಾ ಟ್ರಸ್ಟ್ ಬೆಂಗಳೂರು ಇದರ ಸದಸ್ಯರಾದ ಸಂದೇಶ್ ರಥಯಾತ್ರೆಯ ಪ್ರಾಮುಖ್ಯತೆಯನ್ನು ತಿಳಿಸಿದರು

ಈ ಕಾರ್ಯಕ್ರಮವು ಕೆ ವಿ ಜಿ ಸಮೂಹ ಶಿಕ್ಷಣ ಸಂಸ್ಥೆಗಳು ಸುಳ್ಯ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸುಳ್ಯ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ರಿ.) ಸುಳ್ಯ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಸುಳ್ಯ, ರೋಟರಿ ಕ್ಲಬ್ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ, ವಕೀಲರ ಸಂಘ ಸುಳ್ಯ, ಜೆ ಸಿ ಐ ಸುಳ್ಯ ಸಿಟಿ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಸೇವಾ ಭಾರತಿ ಹೆಲ್ಪ್ಲೈನ್ ಟ್ರಸ್ಟ್ (ರಿ.) ಸುಳ್ಯ, ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ.) ಸುಳ್ಯ ಇವರ ಸಹಕಾರದೊಂದಿಗೆ ಆಯೋಜನೆಗೊಂಡಿತು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ರಿ.) ಸುಳ್ಯ ಇದರ ಅಧ್ಯಕ್ಷರು ಡಾ. ಲಕ್ಷ್ಮೀಶ ಕೆ ಎಸ್ ರವರು ಅತಿಥಿಗಳನ್ನು ಹಾಗೂ ನೆರೆದಿರುವರನ್ನು ಸ್ವಾಗತಿಸಿದರು.

ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿನಿ ಬಿಂದುಶ್ರೀ ನಶಾ ಮುಕ್ತದ ಕರ್ನಾಟಕ ಅಭಿಯಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ನೆಹರೂ ಮೆಮೋರಿಯಲ್ ಕಾಲೇಜಿನ ಐಕ್ಯೂಎಸಿ ಸಂಯೋಜಕರು ಡಾ ಮಮತಾ ಕೆ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ ರುದ್ರ ಕುಮಾರ್ ಎಂ. ಎಂ, ಮಿಥಾಲಿ ಪಿ ರೈ, ಡಾ ಪ್ರಮೋದ್ ಚಂದ್ರಾವತಿ, ಎನ್ನೆಂಸಿ ಆಡಳಿತಧಿಕಾರಿ ಚಂದ್ರಶೇಖರ್ ಪೇರಾಲು, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸುಳ್ಯ (ರಿ.) ಇದರ
ಮಹಿಳಾ ಪ್ರತಿನಿಧಿಯಾದ ಡಾ. ಹರ್ಷಿತಾ ಎಂ, ಕಾರ್ಯದರ್ಶಿಯಾದ ಡಾ. ನಿತೀಶ್ ಕೆ, ಖಜಾಂಜಿಯಾದ ಡಾ. ವಿನಯ ಶಂಕರ್ ಭಾರಧ್ವಾಜ್ ಬಿ ಹಾಗೂ 20ಕ್ಕೂ ಅಧಿಕ ಸದಸ್ಯರುಗಳು ಸೇರಿದಂತೆ ಹಲವಾರು ಗಣ್ಯರು, ಉಪನ್ಯಾಸಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles