27.7 C
Sullia
Sunday, March 8, 2026

ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ ಎಮ್.ಬಿ.ಬಿ.ಎಸ್ ಬ್ಯಾಚ್ ಉದ್ಘಾಟನಾ ಕಾರ್ಯಕ್ರಮ ಹಾಗೂ ವೈಟ್ ಕೋಟ್ ಧಾರಣಾ ಸಮಾರಂಭ,ವೈಟ್ ಕೋಟ್ ಕೇವಲ ವಸ್ತ್ರವಲ್ಲ, ಅದು ಜವಾಬ್ದಾರಿ, ನೈತಿಕತೆ ಮತ್ತು ಮಾನವೀಯ ಸೇವೆಯ ಸಂಕೇತ” – ಡಾ ಕೆ.ವಿ ಚಿದಾನಂದ


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ 2025–26ನೇ ಸಾಲಿನ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ವೈಟ್ ಕೋಟ್ ಧಾರಣಾ ಸಮಾರಂಭ ಹಾಗೂ ಉದ್ಘಾಟನಾ ಕಾರ್ಯಕ್ರಮವು ಡಿಸೆಂಬರ್ 18ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಗಣ್ಯರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್‌ಇ (ರಿ), ಸುಳ್ಯ ಅಧ್ಯಕ್ಷರು ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ. ಚಿದಾನಂದ ಅವರು ವಹಿಸಿ ಮಾತನಾಡಿ ವೈಟ್ ಕೋಟ್ ಧಾರಣೆ ಎಂದರೆ ಜವಾಬ್ದಾರಿ, ಶಿಸ್ತು, ನೈತಿಕತೆ ಮತ್ತು ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ. ವಿದ್ಯಾರ್ಥಿಗಳು ಜ್ಞಾನ ಮಾತ್ರವಲ್ಲದೆ ರೋಗಿಗಳ ಮೇಲಿನ ಸಹಾನುಭೂತಿ, ಸಹನೆ ಮತ್ತು ಸೇವಾಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಶಿಸ್ತು ಮತ್ತು ಕಠಿಣ ಪರಿಶ್ರಮದ ಮೂಲಕ ಗುರಿ ಸಾಧಿಸಬೇಕು.ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಲೇಜಿನ ಡೀನ್‌ ಡಾ. ನೀಲಾಂಬಿಕೈ ನಟರಾಜನ್ ಉಪಸ್ಥಿತರಿದ್ದು ಸಂಸ್ಥೆಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭ ವೇದಿಕೆಯಲ್ಲಿ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ರಾಮಚಂದ್ರ ಭಟ್, ಸರ್ಜರಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ಗೋಪಿನಾಥ್ ಪೈ, ಅನಾಟಮಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ವಿ.ಎಸ್ ಪಾರೆ, ಜನರಲ್ ಮೆಡಿಸಿನ್ ವಿಭಾಗ ಮುಖ್ಯಸ್ಥರು ಪ್ರೊ. ಡಾ ಪ್ರಕಾಶ್ ರಾವ್, ಬಯೋಕೆಮಿಸ್ಟ್ರಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ಶಿವರಾಜ್ ಶಂಕರ್ ವೈ.ಎಮ್ ಪೆತಾಲಜಿ ವಿಭಾಗ ಪ್ರೊಫೆಸರ್ ಗರ್ಲ್ ಹಾಸ್ಟೆಲ್ ಚೀಫ್ ವಾರ್ಡನ್ ಡಾ ನವ್ಯ, ಬಾಯ್ಸ್ ಹಾಸ್ಟೆಲ್ ಚೀಫ್ ವಾರ್ಡನ್ ಅನಾಟಮಿ ವಿಭಾಗದ ಪ್ರೊಫೆಸರ್ ಡಾ ಸಚಿನ್, ಪೆತಾಲಜಿ ವಿಭಾಗ ಪ್ರೊಫೆಸರ್ ಡಾ ದಾಮೋದರ್ ಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ವೃತ್ತಿಗೆ ಅಧಿಕೃತ ಪ್ರವೇಶವನ್ನು ಸೂಚಿಸುವ ದ್ಯೋತಕವಾಗಿ ನೀಡಲಾಗುವ ವೈಟ್ ಕೋಟ್ ಅನ್ನು ವಿತರಿಸಲಾಯಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ ಲೀಲಾಧರ್ ಡಿ.ವಿ, ಡಾ ಶೀಲಾ ಜಿ ನಾಯಕ್, ಡಾ ಜಯವಾಣಿ ಲೀಲಾಧರ್, ಡಾ ರವಿಶಂಕರ್ ಡಾ ಸಾಯಿ ಗೀತಾ, ಡಾ ಗೀತಾ ದೊಪ್ಪಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಡಾ ಪ್ರಕಾಶ್ ರಾವ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಡಾ ಶೃತಿ ಪಿ ರೈ ಎಮ್.ಬಿ.ಬಿ.ಎಸ್ ಕೋರ್ಸ್ ಕುರಿತಾಗಿ ಸಂಕ್ಷಿಪ್ತ ಮಾಹಿತಿ ನೀಡಿದರು. ಡಾ ಶಿವರಾಜ್ ಶಂಕರ್ ವೈ.ಎಮ್ ಫೌಂಡೇಶನ್ ಕೋರ್ಸ್ ಕುರಿತಾದ ಸಿವಿವರವಾದ ಮಾಹಿತಿ ನೀಡಿದರು. ಡಾ ವಿ. ಎಸ್ ಪಾರೆ ಪ್ರತಿಜ್ಞಾ ವಿಧಿ ಬೋಧಿಸಿದರು, ಡಾ ನವ್ಯ ಹಾಸ್ಟೆಲ್ ನೀತಿ ನಿಯಮಗಳನ್ನು ವಿವರಿಸಿದರು. ಡಾ ಗೀತಾ ದೊಪ್ಪಾ ರಾಗಿಂಗ್ ತಡೆಗಟ್ಟುವ ಕ್ರಮಗಳನ್ನು ವಿವರಿಸಿದರು. ಡಾ ದಾಮೋದರ್ ಡಿ ವಂದಿಸಿದರು. ಪ್ರಜ್ಞಾ, ನಮಿತಾ ಹಾಗೂ ಸ್ಮೃತಿ ರೈ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಹ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ಪೋಷಕರು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles