27.7 C
Sullia
Sunday, March 8, 2026

ಗಿಲ್ಲಿ ನಟ ‘ಬಿಗ್ ಬಾಸ್ ಕನ್ನಡ 12’ ಗೆಲ್ಲಲ್ಲ! ವಿನ್ನರ್ ಆಗೋದು ಮಹಿಳೆ ಎಂದ ಖ್ಯಾತ ಜ್ಯೋತಿಷಿ!

ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡ 12’ ಅಂತಿದ್ದ ಹಾಗೆ ಎಲ್ಲರಿಗೂ ಥಟ್ ಅಂತ ಹೊಳೆಯೋದು ಗಿಲ್ಲಿ ನಟ. ಅಷ್ಟರಮಟ್ಟಿಗೆ ಗಿಲ್ಲಿ ನಟ ಕನ್ನಡಿಗರ ಮನೆ ಮಾತಾಗಿದ್ದಾರೆ. ಒಳ್ಳೆಯ ಕಾಮಿಡಿ ಟೈಮಿಂಗ್ ಮೂಲಕ ಮೊದಲ ದಿನದಿಂದಲೂ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರೋರು ಗಿಲ್ಲಿ ನಟ. ಯಾವುದೇ ಡಬಲ್‌ ಮೀನಿಂಗ್ ಕಾಮಿಡಿ ಇಲ್ಲದೆ, ಹೊರಗಿನ ವಿಷಯ ತೆಗೆಯದೆ, ‘ಬಿಗ್ ಬಾಸ್’ ಮನೆಯಲ್ಲಿ ಏನೇನು ನಡೆಯುತ್ತೋ.. ಅದನ್ನೇ ಕಾಮಿಡಿಯಾಗಿ ಹೇಳುತ್ತಾ, ಬೆನ್ನ ಹಿಂದೆ ಮಾತಾಡದೆ, ನೇರವಾಗಿ ಕಹಿ ಸತ್ಯ ಕಕ್ಕುವ ಮಾತಿನ ಮಲ್ಲ ಗಿಲ್ಲಿ. ‘ಬಿಗ್ ಬಾಸ್’ ಆಟ ಇನ್ನೂ ಕಮ್ಮಿ ಅಂದರೂ 4 ವಾರಗಳಿವೆ. ಆಗಲೇ ಈ ಬಾರಿ ವಿನ್ನರ್ ಆಗೋದು ಗಿಲ್ಲಿ ನಟನೇ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ನುಡಿದಿರುವ ಭವಿಷ್ಯವೇ ಬೇರೆ!


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಜ್ಯೋತಿಷಿ ಪ್ರಶಾಂತ್ ಕಿಣಿ ಪ್ರಕಾರ, ಟಾಪ್‌ 3 ಸ್ಪರ್ಧಿಗಳಾಗಿ ಗಿಲ್ಲಿ ನಟ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹೊರಹೊಮ್ಮಲಿದ್ದಾರಂತೆ.

ಜ್ಯೋತಿಷಿ ಪ್ರಶಾಂತ್ ಕಿಣಿ ಅವರ ಟ್ವೀಟ್‌ ವೈರಲ್ ಆಗುತ್ತಿದ್ದ ಹಾಗೆ, ಗಿಲ್ಲಿ ನಟ ಫ್ಯಾನ್ಸ್ ಸಿಡಿದೆದ್ದಿದ್ದಾರೆ. ‘’ಗಿಲ್ಲಿ ಗೆಲ್ಲೋದು 200% ಸತ್ಯ’’, ‘’ನಿಮ್ಮ ಈ ಟ್ವೀಟ್‌ನ ಬುಕ್ ಮಾರ್ಕ್ ಮಾಡಿಕೊಂಡಿದ್ದೀವಿ. ಫಿನಾಲೆಯಲ್ಲಿ ಸಿಗೋಣ’’, ‘’ಯಾರು ಏನೇ ಹೇಳಿದರೂ ಗಿಲ್ಲಿ ಟ್ರೋಫಿ ಗೆಲ್ಲೋದು ಪಕ್ಕಾ’’, ‘’ಇದು ಓಪನ್ ಚಾಲೆಂಜ್ ಗಿಲ್ಲಿ ಟ್ರೋಫಿ ಎತ್ತಿಹಿಡಿಯುತ್ತಾರೆ’’ ಅಂತ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

‘’ಗಿಲ್ಲಿ ಹೆಸರಿನಲ್ಲಿ ಪ್ರಚಾರ ತೆಗೆದುಕೊಳ್ಳಲು ಇದೊಂದು ಗಿಮಿಕ್ ಅಷ್ಟೇ’’, ‘’ಒಂದ್ವೇಳೆ ಗಿಲ್ಲಿ ಗೆದ್ದರೆ, ನೀವು ಜ್ಯೋತಿಷ್ಯ ಬಿಡ್ತೀರಾ?’’ ಅಂತ ಕೆಲವರು ನೇರ ಬಾಣ ಬಿಡುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles