21.6 C
Sullia
Sunday, March 8, 2026

ಸುಳ್ಯ: ಎನ್‌ಎಂಸಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಏಕದಿನ ಶಿಬಿರ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಡಿ. 12 ರಂದು ಅಜ್ಜಾವರದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ಸಭಾಭವನದಲ್ಲಿ ಏಕದಿನ ಶಿಬಿರ ಹಮ್ಮಿಕೊಳ್ಳಲಾಯಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರೂಪನಂದ ಕರ್ಲಪ್ಪಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಾಪ ಯುವಕ ಮಂಡಲ ಅಜ್ಜಾವರ ಇದರ ಅಧ್ಯಕ್ಷ ಗುರುರಾಜ್ ಹಾಗೂ ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಲೋಚನಾ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶೋಧರ ನಾರಾಲು ಕೋಶಾಧಿಕಾರಿ ಜಗನ್ನಾಥ ರೈ ಪಡ್ಡೆಬನ ದೇವಸ್ಥಾನದ ಗುರುಮನೆ ನಾರಾಯಣ ಬೈಪಡಿತ್ತಾಯ, ಕರುಣಾಕರ ಕರ್ಲಪ್ಪಾಡಿ ಯುವತಿ ಮಂಡಲ ಗೌರವ ಸಲಹೆಗಾರಾದ ಜಯಲಕ್ಷ್ಮಿ ಯುವಕ ಮಂಡಲ ಕಾರ್ಯದರ್ಶಿ ನವೀನ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಘಟಕಾಧಿಕಾರಿಗಳಾದ ಹರಿಪ್ರಸಾದ್ ಅತ್ಯಾಡಿ ಸ್ವಾಗತಿಸಿ ಚಿತ್ರಲೇಖ ಕೆ. ಎಸ್ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಶಿಬಿರಾರ್ಥಿಗಳು, ಊರಿನವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related Articles

LEAVE A REPLY

Please enter your comment!
Please enter your name here

Latest Articles