21.6 C
Sullia
Sunday, March 8, 2026

ಮತ್ತೆ ಒಂದಾದ ಮಂಜು – ಲೀಲಾ; ಧರ್ಮಸ್ಥಳದಲ್ಲಿ ತಾಳಿ ಕಟ್ಟಿ ಹೊಸ ಜೀವನ ನಡೆಸಲು ನಿರ್ಧಾರ

ನ್ಯೂಸ್ ನಾಟೌಟ್ : ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಗಂಡನಿಂದ ದೂರ ಆಗಿದ್ದ ಮಹಿಳೆ ಲೀಲಾ ಮತ್ತೆ ಪತಿ ಮಂಜುನಾಥ್‌ ಕೈ ಹಿಡಿದಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಪ್ರಿಯಕರ ಸಂತುನ ಬಿಟ್ಟು, ಗಂಡ ಮಂಜುನಾಥ್‌ ಜೊತೆ ಒಂದಾಗಿ ಮನೆಗೆ ಬಂದಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬಂಗಾರಿ ಸಿಕ್ಕ ಖುಷಿಯಲ್ಲಿ ಮಂಜು ಲೀಲಾಗೆ ಮುತ್ತು ಕೊಟ್ಟು ಚೆನ್ನಾಗಿ ನೋಡ್ಕೋತೀನಿ ಅಂತ ಪ್ರಾಮಿಸ್ ಮಾಡಿದ್ದಾರೆ. ಲೀಲಾ ರೀ ಎಂಟ್ರಿಯಿಂದ ಫುಲ್ ಖುಷಿಯಾಗಿರುವ ಸಂತು ಹೊಸ ಜೀವನ ನಡೆಸ್ತಿದ್ದಾರೆ.

ಧರ್ಮಸ್ಥಳದಲ್ಲಿ ಲೀಲಾಗೆ ಮತ್ತೊಮ್ಮೆ ತಾಳಿ ಕಟ್ಟಿ ಜೀವನ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂತು, ಮಂಜು, ಲೀಲಾ ಟ್ರಯಾಂಗಲ್‌ ಲವ್‌ಸ್ಟೋರಿ ಸಂಚಲನ ಸೃಷ್ಟಿಸಿತ್ತು. ಯಾವ್ದೇ ಕಾರಣಕ್ಕೂ ನಿನ್ ಜೊತೆ ಬಾಳಲ್ಲ ಎಂದಿದ್ದ ಲೀಲಾ, ಕೊನೆಗೂ ಗಂಡ ಮಂಜುನ ಗೋಳಾಟಕ್ಕೆ ಕರಗಿ ಕೈ ಹಿಡಿದಿದ್ದಾರೆ. 

ಪ್ರಿಯಕರ ಸಂತು ಮೇಲೆ ಮಂಜು ಹಲ್ಲೆ ನಡೆಸಿ, ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದು ಹೊಸ ಆಟೋ ಖರೀದಿಸಿ ಬದುಕು ಶುರು ಮಾಡಿದ್ದ. ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಮತ್ತೆ ಒಂದಾಗಿದ್ದು, ಮಂಜು ತನ್ನ ಕುಟುಂಬದವರನ್ನ ನೆನೆದು ಕಣ್ಣೀರು ಹಾಕಿದ್ರು. ಲೀಲಾ ಕೂಡ ನಾವಿಬ್ರು ಹಳೆಯದನ್ನ ಮೆರೆತು ಹೊಸ ಜೀವನ ಶುರು ಮಾಡ್ತಿವಿ ಎಂದು ಹೇಳಿದ್ರು.

ಬನ್ನೇರುಘಟ್ಟದ ಬಾಡಿಗೆ ಮನೆಯಲ್ಲಿ ಈ ಜೋಡಿ ಖುಷಿಯ ಕ್ಷಣಗಳನ್ನ ಕಳೆಯುತ್ತಿದೆ. ಲೀಲಾ ಬಂಗಾರಿ ಬಂದ್ಬಿಡು ಅಂತ ಗೊಗೆರೆಯುತ್ತಿದ್ದ ಮಂಜುನ ಸಂಕಟಕ್ಕೆ ಕೊನೆಗೂ ಸಮಾಧಾನ ಸಿಕ್ಕಿದೆ. ಹಾದಿಬೀದಿ ರಂಪಾಟ ಆಗಿದ್ದ ಮಂಜು ಲೀಲಾ ಕುಟುಂಬ ವಿಚಾರ ಇದೀಗಾ ಸುಖಾಂತ್ಯ ಕಂಡಿದೆ. ಇಬ್ರು ಇನ್ಮುಂದೆ ಚೆನ್ನಾಗಿರಲಿ

Related Articles

LEAVE A REPLY

Please enter your comment!
Please enter your name here

Latest Articles