ನ್ಯೂಸ್ ನಾಟೌಟ್ : ಬಿಗ್ ಬಾಸ್’ ಮನೆಯೊಳಗೆ ಬರೋಕೆ ಮುಂಚಿನಿಂದಲೂ ಕಾವ್ಯ ಶೈವ ಗಿಲ್ಲಿ ನಟ ಪರಿಚಿತರು. ‘ಬಿಗ್ ಬಾಸ್’ ಮನೆಯೊಳಗೆ ಬರುವಾಗ ಇಬ್ಬರೂ ಜಂಟಿಯಾಗಿ ಬಂದರು. ಇಬ್ಬರ ಮಧ್ಯೆ ಆತ್ಮೀಯತೆ, ಉತ್ತಮ ಸ್ನೇಹ ಇತ್ತು. ಆದ್ರೀಗ, ವಿಲನ್ ಕೈವಾಡದಿಂದ ಕಾವ್ಯನ ಗಿಲ್ಲಿ ನಟ ಅಳಿಸಿಬಿಟ್ಟಿದ್ದಾರೆ.
ಸೂಪರ್ ಸಂಡೆ ವಿತ್ ಸುದೀಪ’ ಎಪಿಸೋಡ್‌ನಲ್ಲಿ ತಮ್ಮ ಆಟಕ್ಕೆ ಗಿಲ್ಲಿನೇ ಏಣಿ ಹಾಗೂ ಗಿಲ್ಲಿನೇ ಹಾವು ಎಂದು ಕಾವ್ಯ ಶೈವ ಹೇಳಿದ್ದರು. ಹಾಗೇ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಗಿಲ್ಲಿನ ನೀರಿಗೆ ತಳ್ಳಿ ಕಾವ್ಯ ನಾಮಿನೇಟ್ ಮಾಡಿದರು. ಇದೇ ಸಂದರ್ಭವನ್ನ ಸದುಪಯೋಗ ಪಡಿಸಿಕೊಂಡ ‘ಬಿಗ್ ಬಾಸ್’ ವಿಲನ್.. ಗಿಲ್ಲಿ ಹಾಗೂ ಅಶ್ವಿನಿಗೆ ಸೀಕ್ರೆಟ್ ಟಾಸ್ಕ್ ಕೊಟ್ಟರು. ಆ ಟಾಸ್ಕ್ ಅನ್ವಯ ಕಾವ್ಯಗೆ ಗಿಲ್ಲಿ ಕಣ್ಣೀರು ಹಾಕಿಸಿದ್ದಾರೆ.













