ನ್ಯೂಸ್ ನಾಟೌಟ್: ಸುಳ್ಯದ ಒಡಬಾಯಿ ಬಳಿ ಬಿಎಂಎ ವೆಜ್ ಗ್ರೂಪ್ಸ್ ನವರ ನೂತನ ಹೋಲ್ ಸೇಲ್ ಮಳಿಗೆ ಡಿ.8ರಂದು ಶುಭಾರಂಭಗೊಂಡಿದೆ. ಬಿಎಂಎ ಫ್ರೆಶ್ ಮಾರ್ಟ್ ಇದೀಗ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಜನರ ಮುಂದೆ ಬಂದಿದೆ.
ತರಕಾರಿ, ಹಣ್ಣು ಹಂಪಲು, ಜ್ಯೂಸ್ , ಐಸ್ ಕ್ರೀಮ್, ಸಲಾಡ್, ಡ್ರೈಫ್ರುಟ್ಸ್ ಹಾಗು ಟೀ, ಕಾಫಿ ಎಲ್ಲವು ಕೂಡ ಒಂದೇ ಮಳಿಗೆಯಲ್ಲಿ ದೊರೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಗ್ರಾಹಕರ ನೆಚ್ಚಿನ ತರಕಾರಿ ಅಂಗಡಿಯೆಂದು ಜನಪ್ರಿಯತೆ ಪಡೆದುಕೊಂಡಿರುವ ಬಿಎಂಎ ವೆಜ್ ಗ್ರೂಪ್ಸ್ ನವರ ಈ ಹೋಲ್ ಸೇಲ್ ಮಳಿಗೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಉಪಾಧ್ಯಕ್ಷೆ ಶೋಭಾ ಚಿದಾನಂದ ಉದ್ಘಾಟಿಸಿದರು. ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಫಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.













