ನ್ಯೂಸ್ ನಾಟೌಟ್ : ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಾಸ್ ಲಿಮಿಟೆಡ್ ಇವರಿಂದ ಉಬರಡ್ಕ ಮಿತ್ತೂರು
ಪ್ರಾ.ಕೃ.ಪ.ಸ.ಸಂಘದ ಸಹಯೋಗದಲ್ಲಿ
ಸಹಕಾರ ರತ್ನ ಡಾ| ಎಂ .ಎನ್. ರಾಜೇಂದ್ರ ಕುಮಾರ್
ಇವರ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರದ
ಉದ್ಘಾಟನಾ ಸಮಾರಂಭ ಡಿ. 9ರಂದು ಸಂಘದ ಸಿರಿ ಸಹಕಾರಿ ಸೌಧದಲ್ಲಿ ಬೆಳಗ್ಗೆ 10.30ರಿಂದ ನಡೆಯಲಿದೆ.
ಸಮಾರಂಭವನ್ನು ಮಾಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಉಬರಡ್ಕಮಿತ್ತೂರು ಶ್ರೀ ನರಸಿಂಹ ದೇವಸ್ಥಾನದ ಮೊಕ್ತೇಸರ ಜತ್ತಪ್ಪ ಗೌಡ, ಜೋಡು ದೈವಗಳ ದೈವಸ್ಥಾನ, ಮಿತ್ತೂರು ಇದರ ಅಧ್ಯಕ್ಷ ವೆಂಕಟ್ರಮಣ ಕೆದಂಬಾಡಿ, ಮತ್ತು ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ
ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕೃತ ಶ್ರೀ ವೆಂಕಟರಮಣ ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ ಜಯರಾಮ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಾಸ್ ಲಿ. ಉಪಾಧ್ಯಕ್ಷ ಪ್ರದೀಪ ಯಡಿಯಾಳ, ಉಬರಡ್ಕಮಿತ್ತೂರು ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ, ಸಿಇಒ ಜಯಪ್ರಕಾಶ್. ಯು, ಮಾಸ್ ಲಿ. ಸಿಇಒ ಟಿ. ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ
ಕೆ. ಎಂ. ಲೋಕೇಶ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.













