ನ್ಯೂಸ್ ನಾಟೌಟ್ : ಬಿಗ್ ಬಾಸ್ ನಲ್ಲಿ ರಕ್ಷಿತಾ ಶೆಟ್ಟಿ ಅವರು ಹೊಸ ತಂತ್ರ ಕಂಡು ಹಿಡಿದುಕೊಂಡಿದ್ದಾರೆ. ಬಾತ್ರೂಂ, ಟಾಯ್ಲೆಟ್ ಹೋಗಿ ಅಲ್ಲಿಯೇ ನಿದ್ರೆ ಮಾಡುತ್ತಿದ್ದಾರೆ. ಇದಕ್ಕೆ ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ರಾತ್ರಿಯೆಲ್ಲ ಸರಿಯಾಗಿ ನಿದ್ರಿಸೋದಿಲ್ಲ ಎಂಬ ಆರೋಪ ಇದೆ. ಹೀಗಾಗಿಯೇ ಅವರು ಹಗಲಲ್ಲಿ ನಿದ್ದೆ ಮಾಡುತ್ತಾರೆ. ಈ ಮೊದಲು ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು ಇದೆ. ‘ರಕ್ಷಿತಾ ಹಗಲಲ್ಲಿ ನಿದ್ದೆ ಮಾಡುತ್ತಾರೆ’ ಎಂದು ಕೆಲವರು ಆರೋಪ ಮಾಡಿದ್ದಾರೆ. ಈಗ ಅವರು ಬಿಗ್ ಬಾಸ್ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಮೊದಲು ಡ್ರೆಸ್ ಚೇಂಜ್ ಮಾಡೋ ನೆಪದಲ್ಲಿ ಚೇಂಜಿಂಗ್ ರೂಂಗೆ ಹೋದರು. ಅಲ್ಲಿ ಅವರು ಕೆಲವು ಹೊತ್ತು ನಿದ್ದೆ ಮಾಡಿದಂತೆ ಇದೆ. ಈ ಬಗ್ಗೆ ಗಿಲ್ಲಿ ನಟನಿಗೆ ಅನುಮಾನ ಬಂದಿದೆ. ಅವರು ಈ ಬಗ್ಗೆ ಕೇಳಿದಾಗ ರಕ್ಷಿತಾ ಅವರು ‘ನಾನು ಬಟ್ಟೆ ಚೇಂಜ್ ಮಾಡೋಕೆ ಹೋಗಿದ್ದು’ ಎಂದು ಹೇಳಿದ್ದಾರೆ. ‘ಬಟ್ಟೆ ಚೇಂಜ್ ಮಾಡೋಕೆ ಒಂದು ತಾಸು ಬೇಕಾ’ ಎಂಬುದು ಗಿಲ್ಲಿ ಪ್ರಶ್ನೆ. ‘ಚೇಂಜಿಂಗ್ ರೂಂಗೆ ಹೋಗಿ ಅಲ್ಲಿಯೇ ಅವರು ನಿದ್ದೆ ಮಾಡುತ್ತಾರೆ’ ಎಂದು ಗಿಲ್ಲಿ ಹೇಳಿದರು.
ನಂತರ ಟಾಯ್ಲೆಟ್ಗೆ ಹೋಗಿ ಅಲ್ಲಿ ಅವರು ನಿದ್ದೆ ಮಾಡಿದ್ದಾರೆ. ಎಷ್ಟು ಹೊತ್ತಾದರೂ ಅವರು ಬರದೇ ಇದ್ದಿದ್ದು ನೋಡಿ, ನಾಯಿ ಬೊಗಳೋ ಸೌಂಡ್ ಹಾಕಿದ ಬಿಗ್ ಬಾಸ್, ‘ರಕ್ಷಿತಾ’ ಎಂದು ಎಚ್ಚರಿಸಿದರು.ಆಗ ರಕ್ಷಿತಾ ಟಾಯ್ಲೆಟ್ನಿಂದ ಹೊರ ಬಂದಿದ್ದಾರೆ.
‘ನಾನು ನಿದ್ದೆ ಮಾಡಿರಲಿಲ್ಲ’ ಎಂದು ಸಾಧಿಸಲು ಬಂದರು. ಆದರೆ, ನಿದ್ದೆ ಮಾಡಿದ ತಪ್ಪಿಗೆ ಮನೆಯ ಕ್ಯಾಪ್ಟನ್ ಧನುಷ್, ಶಿಕ್ಷೆಯಾಗಿ ರಕ್ಷಿತಾಗೆ ಸ್ವಿಮ್ಮಿಂಗ್ಪೂಲ್ಗೆ ಇಳಿಸಿದರು. ನಂತರ ರಕ್ಷಿತಾ ಅವರು ಸೂರಜ್ ಬಳಿ ತಾವು ನಿದ್ದೆ ಮಾಡಿದ ವಿಚಾರವನ್ನು ಒಪ್ಪಿಕೊಂಡಿದ್ದಾರೆ.













