ನ್ಯೂಸ್ ನಾಟೌಟ್ : ಹರಿಯಾಣದ ಪಾಣಿಪತ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿಯೊಬ್ಬಳು ಮಕ್ಕಳು ತನಗಿಂತ ಸುಂದರವಾಗಿದ್ದಾರೆ ಅಂತ ಸ್ವಂತ ಮಗ ಸೇರಿ 4 ಮಕ್ಕಳ ಜೀವ ತೆಗೆದಿದ್ದಾಳೆ.
ಹೆಸರು ಪೂನಮ್.. ಇವಳು ತಾಯಿ ಅನ್ನೋ ಪದ ಕರೆಸಿಕೊಳ್ಳಲು ಯೋಗ್ಯಳಲ್ಲ. ಅದೆಂಥಾ ಕ್ರೂರ ಮನಸ್ಥಿತಿ ಈಕೆಯದ್ದು ಅನ್ನೋದು ಗೊತ್ತಾಗಿದೆ. ತನಗಿಂತ ಸುಂದರವಾಗಿದ್ದಾರೆ ಅಂತ ಸ್ವಂತ ಮಗ ಸೇರಿ ನಾಲ್ವರನ್ನ ಈ ಪೂನಮ್ ಮುಗಿಸಿದ್ದಾಳೆ.
ತನಗಿಂತ ಸುಂದರವಾಗಿದ್ದಾರೆ ಅಂತ ಪೂನಮ್ ನಾಲ್ವರನ್ನ ಮು*ಸಿರೋದು ಬೆಳಕಿಗೆ ಬಂದಿದೆ. ಹರಿಯಾಣದ ಪಾಣಿಪತ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತನ್ನ ಸೋದರಿಯ 6 ವರ್ಷದ ಮಗಳನ್ನ ನೀರಲ್ಲಿ ಮುಳುಗಿಸಿ ಈಗ ಸಿಕ್ಕಿಬಿದ್ದಿದ್ದಾಳೆ. ಪೂನಮ್ ಸಂಬಂಧಿಯಾಗಿದ್ದ ಬಾಲಕಿ ನಾಪತ್ತೆಯಾಗಿದ್ದಾಳೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರ ತನಿಖೆ ಶುರು ಮಾಡಿದ್ರು. ಈ ವೇಳೆ ಬಾಲಕಿ ವಿಧಿ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾ*ನ್ನಪ್ಪಿದ್ದಾಳೆ ಅನ್ನೋದು ಬೆಳಕಿಗೆ ಬಂದಿತ್ತು.
ಶಂಕೆ ಮೇರೆಗೆ ಬಾಲಕಿಯ ಚಿಕ್ಕಮ್ಮನನ್ನ (ಪೂನಮ್) ಪೊಲೀಸರು ಬಂಧಿಸಿದ್ರು. ವಿಚಾರಣೆ ವೇಳೆ ಕೊ*ಗಾತಿ ಪೂನಮ್ ಅನೇಕ ವಿಷಯ ಬಾಯ್ಬಿಟ್ಟಿದ್ದಾಳೆ. ತನಗಿಂತ ನೋಡಲು ಸುಂದರವಾಗಿದ್ದಾರೆ ಅಂತ ಇತರ ಮೂರು ಮಕ್ಕಳನ್ನ ಈ ಹಿಂದೆ ಕೊ* ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. 2023, ಸೋನಿಪತ್‌ನಲ್ಲಿ ಇಬ್ಬರು ಮಕ್ಕಳನ್ನ ಈಕೆ ಕೊ* ಮಾಡಿದ್ದಳಂತೆ. ಅಲ್ಲದೇ ತನ್ನ ಮಗ ಸೇರಿ ನಾದಿನಿಯ ಮಗಳನ್ನ ಪೂನಮ್ ಕೊಂ*ದ್ದಳಂತೆ. ಕಳೆದ ಆಗಸ್ಟ್‌ನಲ್ಲಿ ತನ್ನ ಸೋದರ ಸಂಬಂಧಿಯ ಮಗಳನ್ನೂ ಕೊ*ಗೈದಿದ್ದಳಂತೆ. ಹೀಗೆ ಹೀಗೆ ಸ್ವಂತ ಮಗ ಸೇರಿ ನಾಲ್ವರನ್ನ ಕೊಂದ ಪೂನಮ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಈಕೆ ಮಹಿಳೆಯಲ್ಲ.. ತಾಯಿಯಂತೂ ಅಲ್ವೇ ಅಲ್ಲ.. ಇಂಥಹ ರಾಕ್ಷಸಿ ಮನಸ್ಸಿನ ಮಹಿಳೆಗೆ ದೇವರು ಮಕ್ಕಳನ್ನ ಕರುಣಿಸಿದ್ದಾದ್ರೂ ಏಕೆ ಅನ್ನೋದು ಸ್ಥಳೀಯರ ಪ್ರಶ್ನೆ













