ನ್ಯೂಸ್ ನಾಟೌಟ್ : ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿರುವ ಬೋಗ ನಂದೀಶ್ವರ ದೇವಾಲಯದಲ್ಲಿ ದೇವರ ಹುಂಡಿ ಏಣಿಕೆ ವೇಳೆ ಚಿತ್ರ ವಿಚಿತ್ರ ಬೇಡಿಕೆಗಳ ಪತ್ರಗಳು ಪತ್ತೆಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ.
ಹಣಕ್ಕಿಂತ ಹೆಚ್ಚಾಗಿ ಹುಂಡಿಯಲ್ಲಿ ಸಿಕ್ಕ ವಿಚಿತ್ರ ಪತ್ರಗಳು ಮತ್ತು ಫೋಟೋಗಳು ಎಲ್ಲರ ಹುಬ್ಬೇರಿಸಿವೆ.ಗರಿ ಗರಿ ನೋಟುಗಳ ಜೊತೆ ಹುಂಡಿಯಲ್ಲಿ ಮಹಿಳೆಯ ಪೋಟೋ. ಪೋಟೋ ಹಿಂದೆ ಪದ್ಮ ಮತ್ತೆ ತಿರುಗಿ ಬಾ, ಅನ್ನೋ ಪ್ರೇಮ ನಿವೇದನೆ. ನಾನು ಪ್ರೀತಿಸುತ್ತಿರುವ ಹುಡುಗಿಯ ತಂದೆ ತಾಯಿಗೆ ಒಳ್ಳೆ ಬುದ್ದಿ ಕೊಡಿ. ಮುಕ್ತ ಮನಸ್ಸಿನಿಂದ ಒಪ್ಪುವಂತೆ ಮಾಡು ಭಗವಂತ. ನಾನು ಅವಳನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಯಾವುದೇ ತೊಂದರೆ ಆಗದೇ ಒಪ್ಪುವಂತೆ ಮಾಡು ಭಗವಂತ. ನನ್ನ ಗಂಡನಿಗೆ ಒಳ್ಳೆಯ ಕೆಲಸ ಸಿಗಲಿ. ನನ್ನ ಮಗ ಚೆನ್ನಾಗಿ ಓದಲಿ ಇಂಜಿನಿಯರ್ ಆಗಲಿ ಅನ್ನೊ ಪ್ರಾರ್ಥನೆ ಆಶ್ಚರ್ಯಗೊಳಿಸಿದೆ.
ದೇಗುಲದ ಕಾರ್ಯನಿರ್ವಹಣಾ ಅಧಿಕಾರಿ ರುಕ್ಮಿಣಿ ಮಾತನಾಡಿ, ಹರಕೆ ಕಾಣಿಕೆಯ ಜೊತೆ ಕೆಲವು ಭಕ್ತರು ತಮ್ಮ ಬೇಡಿಕೆಗಳನ್ನು ಬರಹದ ಮುಖೇನ ಸಲ್ಲಿಸಿರೋದು ಕಂಡುಬಂದಿದೆ. ಕೆಲವು ಭಕ್ತರು ಬರೆದಿರುವ ಬರಹಗಳು ನಮಗೆ ನಗಣ್ಯ ಅನಿಸಬಹುದು. ಆದರೆ ಅದು ಅವರ ಪಾಲಿಗೆ ದೊಡ್ಡದಿರಬಹುದು. ಹುಂಡಿಯಲ್ಲಿಸಿಕ್ಕ ಎಲ್ಲಚೀಟಿಗಳನ್ನು ನಾವು ನೋಡಿಲ್ಲ. ಅವುಗಳನ್ನು ಎತ್ತಿಟ್ಟಿದ್ದೇವೆ. ಸಣ್ಣ ಪ್ರಮಾಣದಲ್ಲಿಚಿನ್ನ ಮತ್ತು ಬೆಳ್ಳಿಗಳೂ ಹುಂಡಿಯಲ್ಲಿಪತ್ತೆಯಾಗಿವೆ ಎಂದು ತಿಳಿಸಿದ್ದಾರೆ













