21.6 C
Sullia
Sunday, March 8, 2026

ಮತ್ತೆ ಮದುವೆಯಾದ್ರಾ ಸಮಂತಾ? ನಟಿ ಜತೆಗಿರಿವ ಈ ಹುಡುಗ ಯಾರು ?

ನ್ಯೂಸ್ ನಾಟೌಟ್ : ಮಂತಾ ಹಾಗೂ ರಾಜ್ ನಿಡಿಮೋರು ಗುಟ್ಟಾಗಿ ಕಲ್ಯಾಣವಾಗಿರುವ ಸುದ್ದಿ ಟಾಕ್ ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಈಶ ಫೌಂಡೇಶನ್ (Isha Foundation) ಆವರಣದ ಲಿಂಗಭೈರವಿ ದೇವಿಯ ಮುಂದೆ ಸರಳವಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸೋಮವಾರ ಬೆಳ್ಳಂಬೆಳಗ್ಗೆ ಬಹು ಕಾಲದ ಗೆಳೆಯ ರಾಜ್ ನಿಡಿಮೋರು ಜೊತೆ ಸಮಂತಾ ಹೊಸ ಬಾಳಿಗೆ ಕಾಲಿಟ್ಟಿದ್ದು ಸಮಂತಾ ಕೆಂಪು ಸೀರೆ ಧರಿಸಿದ್ದರು ಎಂಬ ಮಾಹಿತಿ ಇದೆ.

ಫ್ಯಾಮಿಲಿ ಮ್ಯಾನ್ ನಿರ್ದೇಶಕನ ಜೊತೆ ಸಮಂತಾ ಕೆಲವು ತಿಂಗಳಿಂದ ಬಹಿರಂಗವಾಗೇ ಕಾಣಿಸ್ಕೊಳ್ತಾ ಬಂದ್ರು. ಇದೀಗ ಈ ಜೋಡಿ ಗುಟ್ಟಾಗಿ ಕಲ್ಯಾಣವಾಗಿದ್ದು, ಇಂದು ಸಂಜೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯನ್ನು ತೆಲುಗು ಮಾಧ್ಯಮಗಳು ವರದಿ ಮಾಡುತ್ತಿವೆ. ರಾಜ್ ನಿಡಿಮೋರು ಈಗಾಗ್ಲೇ ವಿವಾಹವಾಗಿದ್ದು ಸಮಂತಾ ಜೊತೆ ಅವರಿಗೆ ಎರಡನೇ ವಿವಾಹ. ಇನ್ನು ಸಮಂತಾ ಖ್ಯಾತ ನಟ ನಾಗಚೈತನ್ಯ ಜೊತೆಗಿನ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ವೆಬ್‌ಸಿರೀಸ್ ಒಡನಾಡಿ ರಾಜ್ ಜೊತೆ ಸ್ಯಾಮ್ ಪ್ರೀತಿಯಲ್ಲಿ ಬಿದ್ದಿದ್ದು ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ

Related Articles

LEAVE A REPLY

Please enter your comment!
Please enter your name here

Latest Articles