21.6 C
Sullia
Sunday, March 8, 2026

ದೈವ ಅವಮಾನಿಸಿದ ರಣವೀರ್​ಗೆ ರಿಷಬ್ ಕೊಟ್ಟ ಉತ್ತರ ಹೇಗಿತ್ತು ನೋಡಿ: ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್ : ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಅವರು ಮಾಡಿದ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಗ್ಗೆ ಈ ಸಿನಿಮೋತ್ಸವದಲ್ಲಿ ಚರ್ಚೆಯಾಯಿತು. ಅವರಿಗೆ ಸಿಕ್ಕ ಬಹುತೇಕರು ಸಿನಿಮಾನ ಹೊಗಳಿದರು. ಇದಕ್ಕೆ ರಣವೀರ್ ಸಿಂಗ್ ಕೂಡ ಹೊರತಾಗಿಲ್ಲ. ಆದರೆ, ಅವರು ಈ ವೇಳೆ ಎಡವಟ್ಟು ಮಾಡುತ್ತಾ,ದೈವವನ್ನು ದೆವ್ವ ಎಂದರು. ಅಲ್ಲದೆ, ದೈವವನ್ನು ಅನುಕರಿಸಲು ಹೊಗಿ ಟೀಕೆಗೆ ಗುರಿಯಾಗಿದ್ದಾರೆ. ರಿಷಬ್ ಅವರು ರಣವೀರ್​ಗೆ ಅದೇ ವೇದಿಕೆ ಮೇಲೆ ಉತ್ತರ ನೀಡಿದ್ದಾರೆ. ಈ ವಿಡಿಯೋ ತಡವಾಗಿ ವೈರಲ್ ಆಗಿದೆ


Ad Widget
Ad Widget
Ad Widget
Ad Widget
Ad Widget
Ad Widget
Ad Widget

ರಣವೀರ್ ಅವರು ದೈವವನ್ನು ಅವರು ತಮ್ಮ ವಿಚಿತ್ರ ಸ್ಟೈಲ್​ನಲ್ಲಿ ಅನುಕರಿಸಿದ್ದಾರೆ. ಈ ಮೂಲಕ ಸಂಸ್ಕೃತಿಗೆ ಅವರು ಅವಮಾನ ಮಾಡಿದ್ದಾರೆ.ಈ ಸಂದರ್ಭದಲ್ಲಿ ರಿಷಬ್ ಅವರು ಮುಖ ಮುಚ್ಚಿಕೊಳ್ಳುತ್ತಿದ್ದರು. ಅವರಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ. ರಿಷಬ್ ಅವರು ರಣವೀರ್​ಗೆ ಉತ್ತರ ನೀಡಬೇಕಿತ್ತು ಎಂಬುದು ಅನೇಕರ ಅಭಿಪ್ರಾಯ ಆಗಿತ್ತು. ಅಸಲಿಗೆ ರಿಷಬ್ ಅವರು ರಣವೀರ್​ಗೆ ಉತ್ತರ ನೀಡಿಯೇ ಬಂದಿದ್ದಾರೆ.

ವೇದಿಕೆಯಿಂದ ಇಳಿದು ಬಂದ ರಣವೀರ್ ಸಿಂಗ್ ಅವರು ರಿಷಬ್​ನ ಹಗ್​ ಮಾಡಲು ಬಂದರು. ಆಗ ಅವರು ಮತ್ತೆ ದೈವವನ್ನು ಅನುಕರಿಸುವ ಪ್ರಯತ್ನ ಮಾಡಿದ್ದಾರೆ. ಆಗ ರಿಷಬ್ ಅವರು ಹಾಗೆ ಮಾಡಬಾರದು ಎಂದು, ಬೆರಳಲ್ಲೇ ಸನ್ನೆ ಮಾಡಿ ತೋರಿಸಿದ್ದಾರೆ. ರಣವೀರ್ ಸಿಂಗ್ ಅವರು ಬಾಲಿವುಡ್​ನ ಖ್ಯಾತ ನಟ. ಅವರಿಗೆ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಲು ಸಾಧ್ಯವಿಲ್ಲ. ಹೀಗಾಗಿ, ರಿಷಬ್ ಅವರು ಈ ತಂತ್ರ ಉಪಯೋಗಿಸಿದರು. ಆದರೂ ಅವರು ತಿದ್ದಿಕೊಂಡಂತೆ ಕಾಣಿಸಿಲ್ಲ.

Related Articles

LEAVE A REPLY

Please enter your comment!
Please enter your name here

Latest Articles