27.7 C
Sullia
Sunday, March 8, 2026

ಶತಕದ ಅಂಚಿನತ್ತ ಕೆಂಪು ಸುಂದರಿ ಟೊಮೆಟೊ ಬೆಲೆ, ರೈತರ ಮುಖದಲ್ಲಿ ಮಂದಹಾಸ,ಎಷ್ಟಿದೆ ದರ?

ನ್ಯೂಸ್ ನಾಟೌಟ್ : ಟೊಮೆಟೊ ಬೆಲೆ (Tomato Price) ಮತ್ತೆ ಏರಿಕೆಯಾಗಿದೆ. ಇದರಿಂದ ರೈತರು ಖುಷ್‌ ಆದರೂ ಗ್ರಾಹಕರ ಜೇಬಿಗೆ ಮಾತ್ರ ಕತ್ತರಿ ಬೀಳುತ್ತೆ ಅನ್ನೋದೇ ಚಿಂತೆ. ಕಳೆದ ತಿಂಗಳು 10-20 ರೂ. ಗಳಷ್ಟಿದ್ದ ಕೆ.ಜಿ ಟೊಮೆಟೊ ಬೆಲೆ ದಿಢೀರ್‌ ಏರಿಕೆ ಕಂಡಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಕಳೆದ 8-10 ದಿನಗಳಲ್ಲಿ ಟೊಮೆಟೊ (Tomato) ಬೆಲೆ ಏರಿಕೆ ಕಂಡಿದ್ದು, 80 ರಿಂದ 90 ರೂ. ಅಂಚಿಗೆ ತಲುಪಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.

2 ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿತ ಉಂಟಾಗಿ ರಸ್ತೆಗೆ ಹಾಕಿದ್ದ ಬೆಳೆಗಾರರಿಗೆ ಎರಡು ತಿಂಗಳ ಅಂತರದಲ್ಲಿ ಲಾಭ ಹುಡುಕಿಕೊಂಡು ಬರುತ್ತಿದೆ. ಉತ್ತಮ ದರ್ಜೆಯ ಟೊಮೆಟೊ ಪ್ರತಿ ಕೆಜಿಗೆ 80 ರೂ. ತಲುಪಿದ್ದರೆ, ತಳ್ಳು ಗಾಡಿ ವ್ಯಾಪಾರಿಗಳು 90 ರೂ.ಗೆ ಮಾರಾಟ ಮಾಡ್ತಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಇಳುವರಿ ಕಡಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಟೊಮೆಟೊ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ನಾಸಿಕ್ ನಿಂದ ಪೂರೈಕೆ ಆಗುತ್ತಿದ್ದ ಟೊಮೆಟೊ ಇಳಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಆಗಿದೆ.

Related Articles

LEAVE A REPLY

Please enter your comment!
Please enter your name here

Latest Articles