ನ್ಯೂಸ್ ನಾಟೌಟ್ :ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ವರದಿಯಾಗಿದ್ದು, ಪೊನ್ನಂಪೇಟೆ ತಾಲೂ ಕಿನ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಮೂಕ್ಕಳಮಾಡ ಸುರೇಶ್ ಎಂಬುವವರ ಪತ್ನಿ ಸುಮಿತಾ(48) ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಮಹಿಳೆ ಮನೆಯಲ್ಲಿ ಕಾಣದ ಹಿನ್ನೆಲೆ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಅಕ್ಕಪಕ್ಕದವರ ಸಹಕಾರದಿಂದ ಹುಡುಕಾಟ ಮುಂದುವರೆಸಿದಾಗ ಕೆರೆಯೊಂದರಲ್ಲಿ ಮೃತದೇಹ ಕಂಡು ಬಂದಿದೆ.
ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶ್ರೀಮಂಗಲ ಠಾಣಾಧಿಕಾರಿ ಎ.ಎಸ್.ರವೀಂದ್ರ, ಎ.ಎಸ್.ಐ ಸುಕುಮಾರ್, ಸಿಬ್ಬಂದಿಗಳಾದ ಎಂ.ಪಿ.ಮೇಘನಾ, ಎಸ್.ಎಸ್.ಅರುಣ್ ಹಾಗೂ ಧರಣೇಶ್ ಅವರುಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಸಹಾಯದಿಂದ ಕೆರೆಯಿಂದ ಮೃತ ದೇಹವನ್ನು ಹೊರ ತೆಗೆದು ಮಹಜರು ನಡೆಸಲಾಯಿತು.













