ನ್ಯೂಸ್ ನಾಟೌಟ್ : ತಮಿಳಿನ ‘ಸರಿಗಮಪ 2025’ ಗ್ರ್ಯಾಂಡ್ ಫಿನಾಲೆ ನವೆಂಬರ್ 23ರಂದು ನಡೆದಿದೆ. ಜೀ ತಮಿಳಿನಲ್ಲಿ ಇದು ಪ್ರಸಾರ ಕಂಡಿದ್ದು, ಆರು ಮಂದಿ ಫಿನಾಲೆಯಲ್ಲಿ ಇದ್ದರು. ಇದರಲ್ಲಿ ಕನ್ನಡದ ಶಿವಾನಿ ಕೂಡ. ಅವರ ಅದ್ಭುತ ಕಂಠಕ್ಕೆ ಜಡ್ಜ್ಗಳು ಮಾತ್ರವಲ್ಲ ವೀಕ್ಷಕರೂ ತಲೆಬಾಗಿದ್ದರು. ಆದರೆ ಕರ್ನಾಟಕದವರಾದ ಶಿವಾನಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ. ಸುಶಾಂತಿಕಾ ಅವರು ಈ ಅವಾರ್ಡ್ ಗೆದ್ದಿದ್ದಾರೆ. ಆಕರ್ಷಕ ಟ್ರೋಫಿ ಜೊತೆ ವಿನ್ನಿಂಗ್ ಅಮೌಂಟ್ ಪಡೆದುಕೊಂಡಿದ್ದಾರೆ.
ಶ್ರೀಹರಿ ರವೀಂದ್ರನ್, ಸುಶಾಂತಿಕಾ, ಚಿನ್ನು ಸೇದಮಿಲನ್, ಸಪೇಸನ್, ಪವಿತ್ರಾ ಹಾಗೂ ಶಿವಾನಿ ಫಿನಾಲೆಯಲ್ಲಿ ಇದ್ದರು. ಸಪೇಸನ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಚಿನ್ನು ಎರಡನೇ ರನ್ನರ್ ಅಪ್ ಆದರು.
ವಿನ್ನರ್ ಸುಶಾಂತಿಕಾ ಅವರಿಗೆ 15 ಲಕ್ಷ ರೂಪಾಯಿ ವಿನ್ನಿಂಗ್ ಅಮೌಂಟ್ ಸಿಕ್ಕಿದೆ. ಎಂಪಿ ಡೆವಲಪರ್ಸ್ ಅವರು ಮನೆಯನ್ನು ನೀಡಿದ್ದಾರೆ. ಇನ್ನು, ಈ ಗೆಲುವಿನಿಂದ ವಿನ್ನರ್ಗೆ ಸಾಕಷ್ಟು ಆಲ್ಬಂ ಡೀಲ್, ಸಿಂಗಿಂಗ್ ಆಫರ್ಗಳು ಬರಲಿವೆ. ಈ ವರ್ಷ ಮೇ 24ರಂದು ಶೋ ಆರಂಭ ಆಯಿತು. ಶಿವಾನಿ ಅವರು ಅದ್ಭುತವಾಗಿ ಸ್ಪರ್ಧೆ ನೀಡಿದ್ದರು.
ಶಿವಾನಿ ಅವರು ಈ ಮೊದಲು ಕನ್ನಡದಲ್ಲಿ ಸ್ಪರ್ಧೆ ಮಾಡಿದ್ದರು. ಆಗಲೂ ಅವರಿಗೆ ಗೆಲುವು ಸಿಕ್ಕಿರಲಿಲ್ಲ. ಆದರೆ, ಈಗ ಅವರು ಪರಭಾಷೆಗೆ ತೆರಳಿ ತಮ್ಮ ತನವನ್ನು ಸಾಬೀತು ಮಾಡಿ ಬಂದಿದ್ದಾರೆ.













