21.6 C
Sullia
Sunday, March 8, 2026

ಮಡಿಕೇರಿ :ಫುಟ್ಬಾಲ್ ಪಂದ್ಯದ ವೇಳೆ ಎರಡು ಗುಂಪಿನ ನಡುವೆ ಘರ್ಷಣೆ, ಸ್ಥಳಕ್ಕಾಗಮಿಸಿದ ಪೊಲೀಸರು

ನ್ಯೂಸ್ ನಾಟೌಟ್ : ಕೊಡಗಿನ ವಿರಾಜಪೇಟೆ ನಗರದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಣೆಗೆ ಬಂದಿದ್ದ ಎರಡು ತಂಡಗಳ ಬೆಂಬಲಿತ ಪ್ರೇಕ್ಷಕರ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟ ಘಟನೆ ಕಳೆದ ರಾತ್ರಿ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವಿರಾಜಪೇಟೆ ನಗರದ ತಾಲ್ಲೂಕು ಮೈದಾನದಲ್ಲಿ ಕಂಡಗ ಗ್ರಾಮ ಆಟಗಾರರು ಹಾಗೂ ಕೇರಳ ರಾಜ್ಯದ ಆಟಗಾರರ ನಡುವೆ ಫುಟ್ಬಾಲ್ ಪಂದ್ಯ ಕಳೆದ ಮೂರು ದಿನಗಳಿಂದ ನಡೆಯುತ್ತಿತ್ತು. ಭಾನುವಾರ (ನ.23) ರಾತ್ರಿ ಹೊನಲು ಬೆಳಕಿನಲ್ಲಿ ಸೆಮಿಫೈನಲ್‌ ಪಂದ್ಯ ನಡೆಯುತ್ತಿದ್ದ ವೇಳೆ ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕರು ಎರಡು ತಂಡದ ಆಟಗಾರರನ್ನ ಶಿಳ್ಳೆ, ಚಪ್ಪಾಳೆಗಳಿಂದ ಹುರಿದುಂಬಿಸುತ್ತಿದ್ದರು.

ಈ ನಡುವೆ ಕೆಲ ಪ್ರೇಕ್ಷಕರು ಕೇರಳ ಗೆಲುವು ಸಾಧಿಸುತ್ತೆ ಅಂತ, ಇನ್ನೂ ಕೆಲವರು ಕೊಡಗಿನ ಕಂಡಗ ಗ್ರಾಮದ ಆಟಗಾರರೇ ಗೆಲುವು ಸಾಧಿಸುತ್ತಾರೆ ಅಂತ ಚೀರತೊಡಗಿದ್ರು. ಹೀಗಿರುವಾಗ ಇಬ್ಬರ ನಡುವೆ ಗಲಾಟೆ ಏರ್ಪಟ್ಟಿದೆ. ಕೊನೆಗೆ ರೊಚ್ಚಿಗೆದ್ದು ಎರಡೂ ಗುಂಪಿನವರು ಕುರ್ಚಿ ಎಸೆದಾಡಿದ್ದಾರೆ.‌ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ವಿರಾಜಪೇಟೆ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದರು.ಬಳಿಕ ಪೈನಲ್ ಪಂದ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ

Related Articles

LEAVE A REPLY

Please enter your comment!
Please enter your name here

Latest Articles