ನ್ಯೂಸ್ ನಾಟೌಟ್ : ಜೀ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದ್ದು ಸಕತ್ ವೈರಲ್ ಆಗಿದೆ. ಅದರಲ್ಲಿ ಗೃಹಿಣಿಯೊಬ್ಬರು ವೇದಿಕೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ತೀರ್ಪುಗಾರರು ಗೃಹಿಣಿಯ ನೃತ್ಯ ಕಂಡು ಅಚ್ಚರಿಗೊಂಡಿದ್ದಾರೆ. ವೇದಿಕೆಗೆ ಬಂದ ಶ್ರೀದೇವಿ ಅವರು ತರ ತರ ಒಂತರ ಹಾಡಿಗೆ ಬಿಂದಾಸ್ ಆಗಿ ನೃತ್ಯ ಮಾಡಿದ್ದಾರೆ. ಗೃಹಿಣಿಯ ಡ್ಯಾನ್ಸ್ ನೋಡುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರು ಬೆರಗಾಗಿದ್ದಾರೆ. ಡ್ಯಾನ್ಸ್ ಕೊನೆಯಲ್ಲಿ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಅದರಲ್ಲೂ ನಟ ಶಿವರಾಜ್ ಕುಮಾರ್ ಅವರು ಗೃಹಿಣಿಯ ಡ್ಯಾನ್ಸ್ ನೋಡಿ, ಬಹಳ ಚೆನ್ನಾಗಿ ಮಾಡಿದ್ದೀರಿ. ಅಪ್ಪು ಹಾಡಿಗೆ ಡ್ಯಾನ್ಸ್ ಮಾಡೋದು ಅಷ್ಟು ಸುಲಭ ಅಲ್ಲ ಎಂದಿದ್ದಾರೆ.ಬಳಿಕ ತೀರ್ಪುಗಾರರು ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ.













