21.6 C
Sullia
Sunday, March 8, 2026

ಕಲ್ಲುಗುಂಡಿ: ಅಂಗಡಿಯೊಳಗೆ ಹೋರಿಗಳ ಕಾಳಗ..! ಅಂಗಡಿ ಪುಡಿ..ಪುಡಿ, ಭಾರಿ ನಷ್ಟ

ನ್ಯೂಸ್ ನಾಟೌಟ್: ಸಿನಿಮಾದಲ್ಲಿ ರೌಡಿಗಳು ಮತ್ತು ಹೀರೋ ನಡುವಿನ ಕಾದಾಟದಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಾಗ ಅಂಗಡಿ ಸುತ್ತಲಿನ ಅಮೂಲ್ಯ ವಸ್ತುಗಳು ಪುಡಿ..ಪುಡಿಯಾಗುವುದನ್ನು ನೋಡಿದ್ದೇವೆ. ಆದರೆ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿ ಬಳಿ ಎರಡು ಹೋರಿಗಳು ಡಬ್ಲ್ಯೂ ಡಬ್ಲ್ಯೂಎಫ್ ಮಾಡಿಕೊಂಡ ಪರಿಣಾಮ ಅಂಗಡಿಯೊಂದು ಪುಡಿಪುಡಿಯಾಗಿದೆ. ಹೋರಿಗಳ ಪುಂಡಾಟಿಕೆಯಿಂದ ಮಹಿಳೆಯೊಬ್ಬರಿಗೆ ಗಾಯವಾಗಿದೆ‌. 1 ಲಕ್ಷ ರೂ‌. ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಸೇರಿದಂತೆ ಹಲವಾರು ಮಂದಿ ಆಗಮಿಸಿದ್ದಾರೆ. ಹೋರಿಗಳಿಗಲ್ಲ ಅದರ ಮಾಲೀಕರಿಗೆ ಶಿಕ್ಷೆ ಕೊಡಬೇಕೆಂಬ ಪೋಸ್ಟ್ ಗಳು ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles