21.6 C
Sullia
Sunday, March 8, 2026

ಸಂಧ್ಯಾ ಪವಿತ್ರರಿಂದ ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : ಬಿಗ್ ಬಾಸ್ ಶುರುವಾದ ದಿನದಿಂದ ಸೌಂಡು ಹೆಚ್ಚಾಗಿದೆ. ಮೊನ್ನೆ ಮೊನ್ನೆ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿತ್ತು. ಈಗ ನಟ ಕಿಚ್ಚ ಸುದೀಪ್ (Kichcha Sudeep) ವಿರುದ್ಧ ಮಹಿಳಾ ಆಯೋಗದಲ್ಲಿ (Women’s Commission) ಪ್ರಕರಣ ದಾಖಲಾಗಿದೆ. ಜೊತೆಗೆ ಅಶ್ವಿನಿ ಗೌಡ ವಿರುದ್ಧವೂ ದೂರು ದಾಖಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬಿಗ್ ಬಾಸ್ ಬುಡಕ್ಕೆ ಈಗ ಕೇಸಿನ ಬಿಸಿ ತಟ್ಟಿದೆ. ರಕ್ಷಿತಾ ಶೆಟ್ಟಿ ವಿರುದ್ಧ ಸುದೀಪ್ ಗರಂ ಆಗಿದ್ದು, ನನ್ನ ಪಿತ್ತ ನೆತ್ತಿಗೇರುತ್ತಲ್ಲ ಅದಕ್ಕಿಂತ ಮೊದಲು ಅಂತಾ ಬೈದಿದ್ರು. ಇದು ಮಹಿಳೆಗೆ ಆದ ಅವಮಾನ, ದರ್ಪ ಅಂತಾ ಸಂಧ್ಯಾ ಪವಿತ್ರ ಅನ್ನೋರು ಆಯೋಗದಲ್ಲಿ ದೂರು ದಾಖಲು ಮಾಡಿದ್ದಾರೆ. ಜೊತೆಗೆ ಬಿಡದಿ ಠಾಣೆಗೂ ದೂರು ಕೊಟ್ಟಿದ್ದಾರೆ. ಇನ್ನು ಸಂಧ್ಯಾ ದೂರು ಕೊಡುತ್ತಿದ್ದಂತೆ ಸುದೀಪ್ ಅಭಿಮಾನಿಗಳು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂಧ್ಯಾ ಅಳಲು ತೋಡಿಕೊಂಡಿದ್ದಾರೆ.

ಇನ್ನು ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧವೂ ಆಯೋಗದ ಮೆಟ್ಟಿಲೇರಿರುವ ಸಂಧ್ಯಾ ರಕ್ಷಿತಾರನ್ನು ಎಸ್ ಕ್ಯಾಟಗರಿ, ಎಲ್ಲಿಂದ ಬಂದಿದ್ಯಾ ಗೊತ್ತು ಅಂತಾ ನಿಂದಿಸಿದ್ದಕ್ಕೆ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ ರಿಷಿಕಾ ವಿರುದ್ಧವೂ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

Latest Articles