21.6 C
Sullia
Sunday, March 8, 2026

ಶಬರಿಮಲೆಯಲ್ಲಿ ಭಕ್ತ ಸಾಗರ, ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ವೃದ್ಧೆ ಸಾವು

ನ್ಯೂಸ್ ನಾಟೌಟ್ : ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ ಆರಂಭವಾಗಿದೆ. ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಶಬರಿಮಲೈನಲ್ಲಿ ಅಯ್ಯಪ್ಪನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಒಂದೂವರೆ ದಿನದಲ್ಲಿ ಒಂದೂವರೆ ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಆದರೆ, ಭಾರೀ ಜನಸ್ತೋಮದಿಂದಾಗಿ ಪಂಪಾದಿಂದ ಶಬರಿಮಲೆಗೆ ತಲುಪಲು 7 ಗಂಟೆಗಳು ಬೇಕಾಗಿದ್ದು ಎಲ್ಲಿ ನೋಡಿದ್ರೂ ಜನಜಂಗುಳಿ ಇದೆ. ಅದರಲ್ಲೂ 18ನೇ ಮೆಟ್ಟಿಲು ಹತ್ತಲು ಭಕ್ತರಲ್ಲಿ ನೂಕು ನುಗ್ಗಲು ಶುರುವಾಗಿದೆ. 

ಕೇರಳದಲ್ಲಿ ಹೊಸ ವೈರಸ್ ಆತಂಕ ಹೆಚ್ಚಿಸಿದೆ. ಮೆದುಳು ತಿನ್ನುವ ಅಮಿಬಾ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪುಣ್ಯನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಿ, ಬಿಸಿ ನೀರನ್ನೇ ಸೇವಿಸಲು ಕೇರಳ ಸರ್ಕಾರ ಸಲಹೆ ನೀಡಿದೆ.ಈ ಮದ್ಯೆ, ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ಕೋಝಿಕ್ಕೋಡ್‌ನ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.. ಪಂಪಾದಿಂದ ಅಪ್ಪಾಚಿಮೇಡು ತಲುಪಿದಾಗ ಕುಸಿದು ಬಿದ್ದ ಮಹಿಳೆ ಸಾವು ಕಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles