27.7 C
Sullia
Sunday, March 8, 2026

ಸ್ಕ್ಯಾನಿಂಗ್ ಸೆಂಟರ್ ಗೆ ಬರುತ್ತಿದ್ದ ಮಹಿಳೆಯರ ಮೈ ಕೈ ಮುಟ್ಟುತ್ತಿದ್ದ ವೈದ್ಯ, ಹೊಟ್ಟೆ ನೋವೆಂದು ಬಂದ ಮಹಿಳೆಯ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದಳು ಮಹಿಳೆ..!

ನ್ಯೂಸ್ ನಾಟೌಟ್: ವೈದ್ಯರು ದೇವರಿಗೆ ಸಮಾನ ಅನ್ನುವ ಕಾಲವಿತ್ತು. ಈಗ ಕಾಲ ಹಾಗೆ ಇಲ್ಲವೇನೋ ಅನ್ನಿಸುವಂತಹ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸ್ಕ್ಯಾನಿಂಗ್ ಸೆಂಟರ್​ಗೆ ಬರುವ ಮಹಿಳೆಯರ ಮೇಲೆ ರೇಡಿಯಾಲಜಿಸ್ಟ್ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆರೋಪವೊಂದು ಕೇಳಿ ಬಂದಿದೆ. ಆನೇಕಲ್ ಪಟ್ಟಣದಿಂದಲ್ಲಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್​​ನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಜಯಕುಮಾರ್ ವಿರುದ್ಧ ಆರೋಪ ಕೇಳಿಬಂದಿದೆ. ಸ್ಕ್ಯಾನಿಂಗ್​ ನೆಪದಲ್ಲಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನಿದು ಘಟನೆ..?

ಹೊಟ್ಟೆ ನೋವಿನ ಕಾರಣ ಪತಿಯೊಂದಿಗೆ ಮಹಿಳೆ ಸ್ಕ್ಯಾನಿಂಗ್​ ಸೆಂಟರ್​​ಗೆ ಹೋಗಿದ್ದಳು. ಈ ವೇಳೆ ಸ್ಕ್ಯಾನಿಂಗ್​ ನೆಪದಲ್ಲಿ ರೇಡಿಯಾಲಜಿಸ್ಟ್​ ಜಯಕುಮಾರ್​ ಮಹಿಳೆ ಖಾಸಗಿ ಅಂಗಗಳಿಗೆ ಕೈ ಹಾಕಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಹಾಕಿರುವ ಆರೋಪಿ, ಈ ವಿಚಾರ ಹೊರಗೆ ಬಾಯ್ಬಿಡದಂತೆ ಮಹಿಳೆಗೆ ಧಮ್ಕಿ ಹಾಕಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಯಿಸೋದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಯ ದೃಶ್ಯವನ್ನು ಸಂತ್ರಸ್ತ ಮಹಿಳೆ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ, ಪೊಲೀಸರು ಆರೋಪಿ ಜಯಕುಮಾರ್​ನನ್ನು ಈವರೆಗೆ ಬಂಧಿಸಿಲ್ಲ. ಬದಲಾಗಿ ಠಾಣೆಗೆ ಕರೆಸಿ ಬಿಟ್ಟುಕಳುಹಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles