ನ್ಯೂಸ್ ನಾಟೌಟ್: ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಇದೀಗ ಕೆಎಂಎಫ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ಹಾಲು, ಮೊಸರು ಆಯ್ತು ಈಗ ನಂದಿನಿ ತುಪ್ಪದ ಬೆಲೆ ಕೂಡ ಏರಿಕೆ ಆಗಿದೆ. ದಿಢೀರ್ ಬೆಲೆ ಏರಿಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಕೂಡ ಜಾರಿಗೆ ಬರಲಿದೆ. ಕೆಎಂಎಫ್ ತುಪ್ಪಕ್ಕೆ ಹೊರ ರಾಜ್ಯಗಳಿಂದಲೂ ಭಾರೀ ಬೇಡಿಕೆ ಇದೆ.
ಭಾರೀ ಬೇಡಿಕೆಯ ನಡುವೆ ಬೆಲೆ ಏರಿಕೆಯಾಗಿದ್ದು, ಕೆಎಂಎಫ್ ತುಪ್ಪ ಈಗ ಬಲು ದುಬಾರಿ ಆಗಿದೆ. ಬರೋಬ್ಬರಿ ಒಂದು ಲೀಟರ್ ತುಪ್ಪದ ದರ 90 ರೂ. ಏರಿಕೆಯಾಗಿದೆ. ಇದೀಗ ಒಂದು ಲೀಟರ್ KMF ತುಪ್ಪ 700 ರೂ. ನಿಗದಿ ಮಾಡಲಾಗಿದೆ. ಈ ಮೊದಲು 610 ರೂಗೆ ಒಂದು ಲೀಟರ್ ತುಪ್ಪ ಮಾರಾಟ ಮಾಡಲಾಗ್ತಿತ್ತು. ಜಿಎಸ್ಟಿ ಸ್ಲ್ಯಾಬ್ ಸುಧಾರಣೆ ಮುನ್ನ 650 ರೂ. ಇತ್ತು ಜಿಎಸ್ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಜಿಎಸ್ಟಿ ಸುಧಾರಣೆ ಮುನ್ನ ದರ ಏರಿಸಲು ಕೆಎಂಎಫ್ ನಿರ್ಧರಿಸಿತ್ತು. ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆ ಹಿನ್ನೆಲೆ ಅನಿವಾರ್ಯ ಅಗಿ ತುಪ್ಪದ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದಿನಿಂದಲೇ ಕೆಎಂಎಫ್ ತುಪ್ಪದ ದರ ಏರಿಕೆ ಜಾರಿ ಆಗಿದೆ.
ನಂದಿನಿ ತುಪ್ಪದ ಬೆಲೆಗಳು: 50 ml ಬಾಟಲಿ — ₹47, 100 ml — ₹75, 200 ml — ₹155–165, 500 ml — ₹350–360, 1 ಲೀಟರ್ (1000 ml) — ₹700–720













