27.7 C
Sullia
Sunday, March 8, 2026

ಜಾರಿ ನಿರ್ದೇಶನಾಲಯದಿಂದ (ED) ರಿಲಯನ್ಸ್​ ಗ್ರೂಪ್ ಚೇರ್​ಮನ್ ಅನಿಲ್ ಅಂಬಾನಿಗೆ ಬಿಗ್ ಶಾಕ್..! 3,084 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ನ್ಯೂಸ್ ನಾಟೌಟ್:ಜಾರಿ ನಿರ್ದೇಶನಾಲಯ(ED) ರಿಲಯನ್ಸ್​ ಗ್ರೂಪ್ ಚೇರ್​ಮನ್ ಅನಿಲ್ ಅಂಬಾನಿಗೆ ಬಿಗ್ ಶಾಕ್ ನೀಡಿದೆ. ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ರಿಲಯನ್ಸ್​ ಗ್ರೂಪ್ ಚೇರ್​ಮನ್ ಅನಿಲ್ ಅಂಬಾನಿಯ ಒಡೆತನ ಕಂಪನಿಗಳ ಒಟ್ಟು 3,084 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮುಂಬೈನ ಪಾಲಿ ಹಿಲ್‌ನಲ್ಲಿರುವ ಅಂಬಾನಿ ಅವರ ನಿವಾಸ ಮತ್ತು ದೆಹಲಿ, ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ, ಗೋದಾವರಿಯಲ್ಲಿನ ಹಲವಾರು ವಸತಿ ಮತ್ತು ವಾಣಿಜ್ಯ ಆಸ್ತಿಗಳು ಸೇರಿ ಹಲವು ಆಸ್ತಿಗಳನ್ನು ಪಿಎಂಎಲ್ಎ ಅಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ದೆಹಲಿಯ ಮಹಾರಾಜ ರಂಜಿತ್ ಸಿಂಗ್ ಮಾರ್ಗದಲ್ಲಿರುವ ರಿಲಯನ್ಸ್ ಸೆಂಟರ್‌ನಲ್ಲಿರುವ ಒಂದು ದೊಡ್ಡ ಜಮೀನು ಕೂಡ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಸೇರಿದೆ. ಈ ಪ್ರಕರಣವೂ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (RCFL) ಸಂಗ್ರಹಿಸಿದ ಸಾರ್ವಜನಿಕ ನಿಧಿಯ ತಿರುವು ಮತ್ತು ಅಕ್ರಮ ವರ್ಗಾವಣೆಗೆ ಸಂಬಂಧಿಸಿದೆ.

2017 ಮತ್ತು 2019ರ ನಡುವೆ ಯೆಸ್ ಬ್ಯಾಂಕ್ RHFLನಲ್ಲಿ 2,965 ಕೋಟಿ ರೂ. ಮತ್ತು RCFL ನಲ್ಲಿ 2,045 ಕೋಟಿ ರೂ. ಹೂಡಿಕೆ ಮಾಡಿದೆ. ಬಳಿಕ ಈ ಹೂಡಿಕೆಗಳು ಕಾರ್ಯನಿರ್ವಹಿಸುತ್ತಿಲ್ಲ. ಡಿಸೆಂಬರ್ 2019ರ ವೇಳೆಗೆ 3,300 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಉಳಿದಿವೆ. ಹಾಗೆಯೇ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಸೇರಿದಂತೆ ಹಲವಾರು ರಿಲಯನ್ಸ್ ಗ್ರೂಪ್ ಕಂಪನಿಗಳಲ್ಲಿ 17,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಆರ್ಥಿಕ ಅಕ್ರಮಗಳು ಮತ್ತು ಸಾಲ ಬದಲಾವಣೆ ನಡೆದಿದೆ ಎಂದು ED ಆರೋಪಿಸಿದೆ. ಜುಲೈನಲ್ಲಿ ಮುಂಬೈನಲ್ಲಿ ಇಡಿ ಅಂಬಾನಿಗೆ ಸೇರಿದ ಕಂಪನಿಗಳು ಹಾಗೂ ಸಹವರ್ತಿಗಳಿಗೆ ಸಂಬಂಧಿಸಿದ 35 ಸ್ಥಳಗಳಲ್ಲಿ ಶೋಧ ನಡೆಸಿತ್ತು.  ಬಳಿಕ ಆಗಸ್ಟ್​​ನಲ್ಲಿ ಅವರ ವಿಚಾರಣೆ ನಡೆಸಿತ್ತು.

Related Articles

LEAVE A REPLY

Please enter your comment!
Please enter your name here

Latest Articles