ನ್ಯೂಸ್ ನಾಟೌಟ್ : ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದರವರ 70ನೇ ಹುಟ್ಟುಹಬ್ಬದ ಪ್ರಯುಕ್ತ
ಕೆ.ವಿ.ಜಿ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಸುಳ್ಯ ಇದರ ವತಿಯಿಂದ 28 ಅಕ್ಟೋಬರ್ 2025 ರಂದು ಕೆ ವಿ ಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಈ ಶಿಬಿರದಲ್ಲಿ ಕೆ.ವಿ.ಜಿ. ಕಾನೂನು ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾಘಟಕ ಸಕ್ರೀಯವಾಗಿ ಪಾಲ್ಗೊಂಡಿದ್ದು, ಕಾಲೇಜಿನ ಪ್ರಾoಶುಪಾಲೆ ಪ್ರೊ. ಟೀನಾ ಎಚ್ ಎಸ್,ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಅರ್ಚನಾ ಆರ್ ರೈ, ರಾಷ್ಟ್ರೀಯ ಸೇವಾ ಘಟಕದ ಸಂಯೋಜಕಿ ನಯನ ಪಿ ಯು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ರಕ್ತದಾನ ನೆರವೇರಿಸಿದರು.













