ನ್ಯೂಸ್ ನಾಟೌಟ್ : ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದ ಘಟನೆ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ವರದಿಯಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ
ನಡೆಸಿದ್ದಾರೆ. ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವ ಸ್ಥಳ ಜಿಲ್ಲಾ ಕೇಂದ್ರ
ಮಡಿಕೇರಿಗೆ ಕೇವಲ 12 ಕಿ.ಮೀ ದೂರದಲ್ಲಿದ್ದು, ಆತಂಕ ಮತ್ತಷ್ಟು
ಹೆಚ್ಚಿದೆ.
ಸಮೀಪದ 7ನೇ ಹೊಸಕೋಟಿ, ಕೆದಕಲ್, ಹೊರೂರು,
ಹೊಡಗಾಂರಳ್ಳಿ ಕಂಬಿನಾಡ ಚಿಕ್ಕಬಾಳೆ ಭಾಗಗಳಲ್ಲಿ ತೋಟದ
ಮಾಲೀಕರು, ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡಲು ಭಯ
ಪಡುತಂತಾಗಿದೆ.













