21.6 C
Sullia
Sunday, March 8, 2026

ಸುಳ್ಯ: ಬಸ್ ನಿಂದ ಇಳಿಯಲು ಬಾಗಿಲು ತೆರೆಯದೆ ಪ್ರಯಾಣಿಕನಿಗೆ ಸತಾಯಿಸಿದ ಕೆಎಸ್ಆರ್ ಟಿಸಿ ಬಸ್ ಚಾಲಕ..! ಕರ್ತವ್ಯಲೋಪವೆಸಗಿದ ಚಾಲಕನನ್ನು ಬಸ್‌ನಿಂದ ಇಳಿಸಿ ಮತ್ತೊಂದು ಬಸ್ ಗೆ ನಿಯೋಜಿಸಿದ ಅಧಿಕಾರಿಗಳು

ನ್ಯೂಸ್‌ ನಾಟೌಟ್ : ಕೆಎಸ್ಆರ್ ಟಿಸಿ ಬಸ್ ಚಾಲಕನೋರ್ವ ಪ್ರಯಾಣಿಕ ಇಳಿಯಬೇಕಾಗಿದ್ದ ಸ್ಥಳದಲ್ಲಿ ನಿಲ್ಲಿಸದೆ ಬೇರೆ ಕಡೆ ನಿಲ್ಲಿಸಿ ಸ್ವಯಂಚಾಲಿತ ಬಾಗಿಲು ತೆರೆಯಲು ಸತಾಯಿಸಿದ ಘಟನೆ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪ್ರಯಾಣಿಕ ಕೆಎಸ್ ಆರ್‌ಟಿಸಿ ಪುತ್ತೂರು ಮತ್ತು ಸುಳ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಘಟನೆ ನಡೆದಿರುವುದು ಸುಳ್ಯ- ಕೊಯನಾಡು ರೂಟ್‌ ನಲ್ಲಿ. ಸ್ವಯಂ ಚಾಲಿತ ಬಾಗಿಲನ್ನು ಹೊಂದಿರುವ ಸುಳ್ಯ-ಕೊಯನಾಡು ನಡುವಣ ಕೆಎಸ್ ಆರ್‌ಟಿಸಿ ಬಸ್‌ ಚಾಲಕ ಗಫೂರ್ ಅವರ ಮೇಲೆ ಈ ಆರೋಪ ಕೇಳಿಬಂದಿದೆ. ಅ.26ರ ಭಾನುವಾರ ಕೊಯನಾಡಿನಿಂದ ಸುಳ್ಯಕ್ಕೆ ಬಸ್‌ ಬರುತ್ತಿದ್ದಾಗ ಚಾಲಕ ಸ್ವಯಂಚಾಲಿತ ಬಾಗಿಲು ತೆರೆಯದಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಯಿತು. ಅಲ್ಲದೆ ಪ್ರಯಾಣಿಕರು ಇಳಿಯಬೇಕಾದ ಜಾಗದಲ್ಲಿ ಬಸ್ಸನ್ನು ನಿಲ್ಲಿಸದೆ ಇನ್ನೆಲ್ಲೋ ನಿಲ್ಲಿಸಿ ಬಳಿಕ ಸ್ವಯಂ ಚಾಲಿತ ಬಾಗಿಲನ್ನು ತೆರೆಯದೆ ಸತಾಯಿಸಿದ್ದಾರೆ ಎನ್ನಲಾಗಿದೆ. ಪ್ರಯಾಣಿಕ ನೀಡಿದ ದೂರಿನಂತೆ ಕೆಎಸ್ ಆರ್‌ಟಿಸಿ ಬಸ್‌ನ ಚಾಲನೊಬ್ಬನನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶಿಕ್ಷೆಯ ರೂಪದಲ್ಲಿ ಆ ಬಸ್‌ನಿಂದ ಇಳಿಸಿ ಇನ್ನೊಂದು ಬಸ್‌ಗೆ ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

Latest Articles