ನ್ಯೂಸ್ ನಾಟೌಟ್: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಮಹಾನ್ಯಾಸ ಸಂಕಲ್ಪ ಪೂರ್ವಕ ಅತಿರುದ್ರ ಪುರಶ್ಚರಣೆ ಪ್ರಯುಕ್ತ ಮೊದಲ ದಿನ (ಅ.23) ರುದ್ರಾನುಷ್ಠಾನವು ವಿದ್ಯುಕ್ತವಾಗಿ ಆರಂಭಗೊಂಡಿದೆ.
ಸೇವಾ ರೂಪದಲ್ಲಿ ನಡೆದ ರುದ್ರಾನುಷ್ಠಾನವನ್ನು ಶ್ರೀ ಬಸವೇಶ್ವರ ವೇದ ಪಾಠ ಶಾಲಾ ವಿದ್ಯಾರ್ಥಿಗಳು, ಪೋಷಕರು, ಕೊಕ್ಕಡದ ಅಂಶುಮಾನ್ ಅಭಯಂಕರ ಭಟ್ ಇವರ ಪಾಠ ಶಾಲಾ ವಿದ್ಯಾರ್ಥಿಗಳ ತಂಡವು ಅತ್ಯದ್ಭುತವಾಗಿ ಸಮರ್ಪಣೆ ಮಾಡಿದ್ದಾರೆ. ಇದೇ ದಿನ ರಾತ್ರಿ ಭಜನಾ ಸೇವೆ ನಡೆಯಿತು. ಶ್ರೀ ಬಸವೇಶ್ವರ ಭಜನಾ ಸಮಿತಿ ಸೇವೆ ಸಮರ್ಪಿಸಿದರು. ಮೊದಲ ದಿನದ ಕಾರ್ಯಕ್ರಮವು ಯಶಸ್ವಿಗೊಂಡಿತು. ಊರ ಹಾಗೂ ಪರವೂರಿನ ಸಾಕಷ್ಟು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಧಾರ್ಮಿಕ ಕಾರ್ಯಕ್ರಮವು ನ.17ರ ತನಕ ನಡೆಯಲಿದೆ.













