ನ್ಯೂಸ್ ನಾಟೌಟ್: ಕಷ್ಟಗಳ ಕುಲರಾಶಿಗಳ ಸರ್ವನಾಶಕ್ಕಾಗಿ ಲೋಕ ಕಲ್ಯಾಣಕ್ಕಾಗಿ ನಾಳೆಯಿಂದ (ಅ.22) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿರುವ ಶ್ರೀ ಬಸವನ ಮೂಲ ಬಸವೇಶ್ವರ ದೇವಸ್ಥಾನದಲ್ಲಿ ಶಕ್ತಿ ಶಾಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ತಿಕ ದೀಪೋತ್ಸವ, ಅತಿರುದ್ರ ಪುರಶ್ಚರಣೆ, ಶ್ರೀ ರುದ್ರ ಮಹಾಯಾಗವು ಈ ಅವಧಿಯಲ್ಲಿ ಕ್ರಮವಾಗಿ ಸಾಗಲಿದೆ. ಪ್ರತಿ ನಿತ್ಯ ಶಿವ ಪಂಚಾಕ್ಷರಿ ಹವನ, ಅತಿರುದ್ರ ಪುರಶ್ಚರಣೆ ನಡೆಯಲಿದೆ. ನ.16, 17 ಎರಡು ದಿನ ಮಹಾರುದ್ರ ಯಾಗ ನಡೆಯಲಿದೆ. ಮಹಾಯಜ್ಞದ ಮೂಲಕ ಆವಿರ್ಭವಿಸುವ ಆದ್ಯಾತ್ಮಿಕ ರುದ್ರ ಶಕ್ತಿಯಿಂದಾಗಿ ಧನಾತ್ಮಕ ಶಕ್ತಿಗಳು ವೃದ್ದಿಯಾಗುವುದರ ಜೊತೆಗೆ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ದಿ ತರಲಿದೆ. ಇದು ಶಿವ ದೇವರಿಗೆ ಸಲ್ಲಿಸುವ ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯುತ ಸೇವೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಊರಿನ ಸುತ್ತಮುತ್ತಲಿನ ಗ್ರಾಮದವರು ಸೇರಿದಂತೆ ದಕ್ಷಿಣ ಕನ್ನಡ, ಕೊಡಗು, ಉಡುಪಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ.













