27.7 C
Sullia
Sunday, March 8, 2026

ಮೊದಲ ಪ್ರೀತಿ ಪರಿಶುದ್ಧವೇ? ರಶ್ಮಿಕಾಗೆ ನಿರೂಪಕಿಯ ಪ್ರಶ್ನೆ: ಕೊಡಗಿನ ಬೆಡಗಿ ಕೊಟ್ಟ ಉತ್ತರ ಇದೀಗ ಬಾರಿ ವೈರಲ್

ನ್ಯೂಸ್ ನಾಟೌಟ್ : ಇತ್ತೀಚೆಗೆ, ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಪ್ರಚಾರದ ಭಾಗವಾಗಿ, ರಶ್ಮಿಕಾ ಅವರು ಜೀ ನ್ಯೂಸ್ ತೆಲುಗು ವಾಹಿನಿಗೆ ಚಿತ್ರತಂಡದೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ ಹಾಗೂ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಕೇಳಿದ ಅನೇಕ ಪ್ರಶ್ನೆಗಳಿಗೆ ರಶ್ಮಿಕಾ ಉತ್ತರಿಸಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನಿರೂಪಕಿ ಕೇಳಿದ ಪ್ರಶ್ನೆಗಳಲ್ಲಿ ಪ್ರೀತಿಗೆ
ಸಂಬಂಧಿಸಿದ ಪ್ರಶ್ನೆಗಳು ಕೂಡ ಇದ್ದವು. ಈ ಸಂದರ್ಶನದಲ್ಲಿ, ಮೊದಲ ಪ್ರೀತಿ ಪರಿಶುದ್ಧ ಎಂಬ ಮಾತು ನಿಜವೇ
ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡಿದ ರಶ್ಮಿಕಾ, ಮೊದಲ
ಪ್ರೀತಿ ಶುದ್ಧವಲ್ಲ ಆದರೆ, ಕೊನೆಯ ಪ್ರೀತಿ ಶುದ್ಧ ಎಂದರು. ಅಲ್ಲದೆ,
ನಾವು ಒಬ್ಬ ವ್ಯಕ್ತಿಯ ಬಗ್ಗೆ ಹಲವು ವಿಧಗಳಲ್ಲಿ ಪ್ರೀತಿಯನ್ನು
ಅನುಭವಿಸುತ್ತೇವೆ. ಪ್ರೀತಿಯಲ್ಲಿ ಯಾವುದೇ ಅಸೂಯೆ ಇರುವುದಿಲ್ಲ.
ಎಂದು ಹೇಳಿದರು.


ಲವ್ ಬ್ರೇಕಪ್ ಸಮಯದಲ್ಲಿ, ಹುಡುಗಿಯರು ಹುಡುಗರಿಗಿಂತ
ವೇಗವಾಗಿ ಮರೆತು ಜೀವನದಲ್ಲಿ ಮುಂದುವರಿಯುತ್ತಾರೆ ಎಂಬುದು
ನಿಜವೇ ಎಂದು ಪ್ರಶ್ನಿಸಿದಾಗ, ಎಲ್ಲರೂ ಒಂದೇ ಮಾತನ್ನು ಹೇಳುತ್ತಾರೆ
ಹೇಗೆ? ಏಕೆ? ಎಂದು ರಶ್ಮಿಕಾ ಮರು ಪ್ರಶ್ನೆ ಮಾಡಿದರು. ಅಲ್ಲದೆ,
ಹುಡುಗಿಯರು ಆಂತರಿಕವಾಗಿ ಹೆಚ್ಚು ಬಳಲುತ್ತಾರೆ ಎಂದರು.
ಹುಡುಗರು ತಮ್ಮ ವರ್ತನೆ ಅಂದರೆ, ಅತಿಯಾದ ಗಡ್ಡ ಬಿಡುವುದು
ಹಾಗೂ ಮದ್ಯಪಾನ ಮಾಡುವುದು ಮುಂತಾದವುಗಳಲ್ಲಿ ತಮ್ಮ
ಬ್ರೇಕಪ್ ನೋವನ್ನು ತೋರಿಸಿಕೊಳ್ಳುತ್ತಾರೆ. ಆದರೆ, ಹುಡುಗಿಯರು
ಆಂತರಿಕವಾಗಿ ಬಳಲುತ್ತಾರೆ. ಅದರಲ್ಲೂ ಹುಡುಗರಿಗಿಂತ ಹೆಚ್ಚು
ಬಳಲುತ್ತಾರೆ ಎಂದರು. ಅದೇ ಸಂದರ್ಶನದಲ್ಲಿ, ನೀವು ನನ್ನನ್ನು
ಒಂಟಿಯಾಗಿದ್ದೀರಾ ಎಂದು ಕೇಳಿದರೆ, ರಶ್ಮಿಕಾ, ನಾನೀಗ ಒಳ್ಳೆಯ
ಗೆಳತಿ ಎಂದರು.

Related Articles

LEAVE A REPLY

Please enter your comment!
Please enter your name here

Latest Articles