ನ್ಯೂಸ್ ನಾಟೌಟ್: ಸುಳ್ಯದ ಮುದ್ದು ಮಕ್ಕಳ ಶಾಲೆ ಅಂಜಲಿ ಮೊಂಟೇಸ್ಸೂರಿ ಶಾಲೆಯಲ್ಲಿ ದೀಪಾವಳಿ ಪ್ರಯುಕ್ತ ಅ.18ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲೆಯ ಸಂಚಾಲಕಿ ಗೀತಾಂಜಲಿಯವರು ದೀಪ ಬೆಳಗಿಸಿ ಪುಟಾಣಿ ಮಕ್ಕಳಿಗೆ ದೀಪಾವಳಿ ಹಬ್ಬದ ವಿಶೇಷತೆಯ ಕಥೆಯನ್ನು ಹೇಳಿದರು. ಬಳಿಕ ಶಿಕ್ಷಕರು, ಮಕ್ಕಳು ದೀಪ ಹಚ್ಚಿ ಸಿಹಿ ತಿಂಡಿಯನ್ನು ಹಂಚಲಾಯಿತು.